ಅರಂಬೂರು ಪಾಲಡ್ಕ ಬಳಿ ಪಯಸ್ವಿನಿ ನದಿಯಲ್ಲಿ ಕಂಡು ಬಂದ ಅಪರಿಚಿತ ಶವ ಪತ್ತೆ

0

ಅರಂಬೂರು ಪಾಲಡ್ಕ ಬಳಿ ಪಯಸ್ವಿನಿ ನದಿಯಲ್ಲಿ ಅಪರಿಚಿತ ಶವ ಪತ್ತೆ ಯಾಗಿರುವ ಘಟನೆ ಆ.13 ರಂದು ವರದಿಯಾಗಿದೆ.

ಸ್ಥಳೀಯರು ನದಿಗೆ ಮೀನು ಹಿಡಿಯಲು ಹೋಗಿರುವ ವೇಳೆಯಲ್ಲಿ ಶವ ಕಂಡು ಬಂದಿದ್ದು ಸ್ಥಳೀಯ ಆಲೆಟ್ಟಿ ಪಂಚಾಯತ್ ಸದಸ್ಯ ಸುದೇಶ್ ಅರಂಬೂರು ರವರಿಗೆ ವಿಷಯ ತಿಳಿಸಿದರು. ಸುದೇಶ್ ರವರು ಸುಳ್ಯ ಪೋಲಸರಿಗೆ ವಿಷಯ ತಿಳಿಸಿದರು.
ಸ್ಥಳಕ್ಕೆ
ಸುಳ್ಯ ಪೋಲಿಸರ ಆಗಮಿಸಿದ ಬಳಿಕ ಪೈಚಾರಿನ ಮುಳುಗು ತಜ್ಞರ ಸಹಕಾರದಿಂದ ಶವವನ್ನು ಮೇಲಕ್ಕೆತ್ತಲಾಯಿತು. ಕಳೆದ ಮೂರು ದಿನದ ಹಿಂದೆ ಕಾಣೆಯಾಗಿದ್ದ ಚೆಂಬು ಗ್ರಾಮದ ವ್ಯಕ್ತಿಯೊಬ್ಬರ ಮೃತ ದೇಹವಾಗಿರಬಹುದೆಂದು ಸಂಶಯಿಸಲಾಗಿದೆ. ಶವವನ್ನು ಸುಳ್ಯ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಿರುವುದಾಗಿ ತಿಳಿದು ಬಂದಿದೆ. ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.