ಬಳ್ಪ: ಅಡ್ಡಬೈಲು – ಕಾಯರ್ತಡ್ಕ ರಸ್ತೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ

0

ಬಳ್ಪ ಗ್ರಾ.ಪಂ.ನಲ್ಲಿ ತಿಂಗಳ ಪ್ರಥಮ ಶನಿವಾರ ಸ್ವಚ್ಛ ಶನಿವಾರ ಎಂದು ಪರಿಗಣಿಸಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರಿತ್ತಿದ್ದು, ಅಕ್ಟೋಬರ್ ತಿಂಗಳ ಪ್ರಥಮ ಶನಿವಾರವಾದ ಅ. 7ರಂದು ಕೇನ್ಯ ಗ್ರಾಮದ ಕಾರ್ಯತ್ತಡ್ಕದಿಂದ ಅಡ್ಡಬೈಲು ತನಕ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಯಿತು.

ಬೆಳಿಗ್ಗೆ 9:30ರಿಂದ 12.00 ಗಂಟೆಯವರೆಗೆ ಸ್ವಚ್ಛವಾದ ಕಾರ್ಯ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಬಳ್ಪ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಹರ್ಷಿತ್ ಕಾರ್ಜ, ಉಪಾಧ್ಯಕ್ಷೆ ಶ್ರೀಮತಿ ಪಾರ್ವತಿ ಪಿ.ಡಿ, ಸದಸ್ಯರುಗಳಾದ ರಾಜೀವ ಕಣ್ಕಲ್ , ಚಂದ್ರಶೇಖರ ಅಕ್ಕೇಣಿ, ಮಾಜಿ ಗ್ರಾ.ಪಂ ಉಪಾಧ್ಯಕ್ಷರಾದ ಶ್ರೀಮತಿ ತಾರಾ ಬಿ ರೈ, ಸ್ನೇಹಿತೆಯರ ಕೂಟ ಕೇನ್ಯ ಇದರ ಸದಸ್ಯೆಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೇನ್ಯ ಒಕ್ಕೂಟದ ಅಧ್ಯಕ್ಷ ಮಾಧವ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಬಳ್ಪ ಗ್ರಾ.ಪಂ. ಪ್ರಭಾರ ಅಭಿವೃದ್ಧಿ ಅಧಿಕಾರಿ ರಘು ಎನ್.ಬಿ, ಸಿಬ್ಬಂದಿಗಳಾದ ರವಿಕುಮಾರ್ ಕೆ.ವಿ, ಸಂಜೀವ ಕೆ, ಮೋಹನ ಕೆ, ವರುಣ್ ಬಾಬು ಹಾಗೂ ಗ್ರಾಮಸ್ಥರು ಭಾಗವಹಿಸಿ ಸ್ವಚ್ಚತಾ ಕಾರ್ಯಕ್ರಮವನ್ನು ಮಾಡಲಾಯಿತು.