ಜಾನ್ ಹೆನ್ರಿ ಡಿಸೋಜ ನಿಧನ

0

ಸುಳ್ಯದ ದಕ್ಷಿಣ ಬೀರಮಂಗಲ ನಿವಾಸಿ ಜಾನ್ ಹೆನ್ರಿ ಡಿಸೋಜ ರವರು ಅಲ್ಪಕಾಲದ ಅಸೌಖ್ಯದಿಂದ ಅ.೧೩ ರಂದು ನಿಧನರಾದರು. ಅವರಿಗೆ ೬೮ ವರ್ಷ ವಯಸ್ಸಾಗಿತ್ತು. ಇವರು ಶ್ರೀ ರಾಮ್ ಪೇಟೆಯಲ್ಲಿ ಹೋಟೆಲ್ ಉದ್ಯಮವನ್ನು ನಡೆಸಿಕೊಂಡು ಮತ್ತು ಇತ್ತೀಚೆಗೆ ಗಾಂಧಿನಗರದಲ್ಲಿ ದಿನಸಿ ಅಂಗಡಿಯನ್ನು ಹೊಂದಿದ್ದರು.
ಮೃತರು ಪತ್ನಿ ಜೂಲಿಯಟ್ ಡಿಸೋಜ, ಪುತ್ರ ಆಂಗ್ಲೊ ಇಂಡಿಯನ್ ಶಿಪ್ಪಿಂಗ್ ಕಂಪನಿಯಲ್ಲಿ ಇಂಜಿನಿಯರ್ ಆಗಿರುವ ರಾಯ್ಸ್ಟನ್ ಡಿಸೋಜಾ, ಮಗಳು ಲ್ಯಾಬ್ ಟೆಕ್ನಾಲಜಿಸ್ಟ್ ರೈನಿ ಡಿಸೋಜಾ, ಸೊಸೆ, ಅಳಿಯ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.