ಪಂಜ: ಹೊಳೆಯಂತಾದ ರಸ್ತೆ, ವಾಹನ ಚಾಲಕರ, ಪಾದಚಾರಿಗಳ ಪರದಾಟ

0

ಪಂಜ ಪೇಟೆಯಿಂದ ದೇವಸ್ಥಾನದ ಕಡೆಯಿಂದ ಗುತ್ತಿಗಾರಿಗೆ ಹೋಗುವ ರಸ್ತೆ ಚರ್ಚ್ ಗೇಟ್ ಬಳಿ ಹೊಳೆಯಾಗಿ ಮಾರ್ಪಾಟಾಗಿದೆ.

ಈ ಬಗ್ಗೆ ಈ ಹಿಂದೆಯೂ ಮಾಧ್ಯಮಗಳಲ್ಲಿ ವರದಿ ಪ್ರಸಾರಗೊಂಡರೂ ಸಂಬಂಧಿಸಿದ ಇಲಾಖೆಯವರು ಮೌನ ವಹಿಸಿರುವುದು ಪ್ರಯಾಣಿಕರಲ್ಲಿ ಅಸಮಾಧಾನ ತಂದಿದೆ. ಈ ರಸ್ತೆಯಲ್ಲಿ ವಾಹನ ಸಂಚರಿಸುವಾಗ ನಡೆದುಕೊಂಡು ಹೋಗುವ ಪಾದಚಾರಿಗಳ ಮೇಲೆ ಕೆಂಪು ನೀರಿನ ಸಿಂಚನವಾಗುತ್ತದೆ‌.

ವಾಹನ ಚಾಲಕರಿಗೂ ಸಣ್ಣ ಸಣ್ಣ ಗುಂಡಿಗಳು ಗೋಚರಿಸದೇ ಅಪಾಯ ಎದುರಾಗುವ ಸಾಧ್ಯತೆ ಇದ್ದು, ಇನ್ನಾದರೂ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.