ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹ

0

ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಂಡಲ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಮಂಗಳೂರು, ಸುಳ್ಯ ತಾಲೂಕು ಸಹಕಾರಿ ಯೂನಿಯನ್, ಸುಳ್ಯ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಇತರ ಸಹಕಾರ ಸಂಘಗಳ ಸಹಕಾರದೊಂದಿಗೆ ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹ – 2023 ಕಾರ್ಯಕ್ರಮವು ಇಂದು ಎಲಿಮಲೆಯ ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೇಪಳಕಜೆ ಗೋಪಾಲಕೃಷ್ಣ ಗೌಡ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ದ.ಕ. ಜಿಲ್ಲಾ ಸಹಕಾರ ಯೂನಿಯನ್ ಮಂಗಳೂರು ಇದರ ಅಧ್ಯಕ್ಷರಾದ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮವನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.

ನೆಲ್ಲೂರು ಕೆಮ್ರಾಜೆ‌ ಸೊಸೈಟಿ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ ಅಧ್ಯಕ್ಷತೆ ವಹಿಸಿದ್ದರು.

2024ರ ಕ್ಯಾಲೆಂಡರ್ ನ್ನು ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ತ್ರಿವೇಣಿ ರಾವ್ ಕೆ. ಬಿಡುಗಡೆಗೊಳಿಸಿದರು.

ನೆಲ್ಲೂರು ಕೆಮ್ರಾಜೆ ಸೊಸೈಟಿಯ ಬೆಳ್ಳಿ ಹಬ್ಬದ ನೆನಪಿಗಾಗಿ ಸೇವಾ ಬಿಂದು ಮರಣ ಸಾಂತ್ವನ ನಿಧಿಯನ್ನು ಕೆ.ಎಂ.ಎಫ್.ನ ಉಪಾಧ್ಯಕ್ಷರಾದ ಎಸ್.ಬಿ. ಜಯರಾಮ ರೈ ಲೋಕಾರ್ಪಣೆಗೊಳಿಸಿದರು.

ಮಂಗಳೂರು ಡಿ.ಸಿ.ಸಿ.‌ ಬ್ಯಾಂಕ್‌ನ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ನಾಯರ್ ರವರು ಮಹಿಳೆಯರು, ಯುವಜನ ಅಬಲವರ್ಗಕ್ಕೆ ಸಹಕಾರ ಸಂಸ್ಥೆಗಳು ಎಂಬ ವಿಷಯದಲ್ಲಿ 6ನೇ ದಿನದ ವಿಷಯ ಮಂಡನೆ ಮಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳಾದ ರಾಧಾಕೃಷ್ಣ ಕೋಟೆ, ಶೈಲೇಶ್ ಅಂಬೆಕಲ್ಲು ಮತ್ತು ಡಿಸಿಸಿ ಬ್ಯಾಂಕ್‌ನ ನಿವೃತ್ತ ಸಿಇಒ ವಿಶ್ವನಾಥ್ ನಾಯರ್ ರವರನ್ನು ಸನ್ಮಾನಿಸಲಾಯಿತು. ಹಾಗೂ ಸಹಕಾರಿ ಸಂಘದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕೊಲ್ಲಮೊಗ್ರ ಪ್ರಾಥಮಿಕ ಸ.ಸಂಘದ ಕಮಲ, ಕಳಂಜ ಬಾಳಿಲ ಸೊಸೈಟಿಯ ವೆಂಕಪ್ಪ ನಾಯ್ಕ ಮತ್ತು ಆನಂದ ಎಸ್., ಚೊಕ್ಕಾಡಿ ಸೊಸೈಟಿಯ ಅಚ್ಚುತ ಡಿ., ಬೆಳ್ಳಾರೆ ಸೊಸೈಟಿಯ ಜತ್ತಪ್ಪ, ಆಲೆಟ್ಟಿಯ ಆನಂದ ಕೆ., ಪಂಬೆತ್ತಾಡಿಯ ಸುಬ್ಬಪ್ಪ ಕೆ., ಕನಕಮಜಲು ಸೊಸೈಟಿಯ ಕುಸುಮಾವತಿ, ಕನಕಮಜಲು ಸೊಸೈಟಿಯ ಗಂಗಾಧರ ಕಾಳಮ್ಮನೆ ಹಾಗೂ ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ. ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನಿವೃತ್ತರಾದ ಸುಬ್ರಹ್ಮಣ್ಯ ಭಟ್, ಜಗನ್ನಾಥ ಶೆಟ್ಟಿ ಉಬರಡ್ಕ ಹಾಗೂ ನಿವೃತ್ತ ಸಿಬ್ಬಂದಿ ಚನಿಯಪ್ಪ ಚೆನ್ನಡ್ಕರವನ್ನು ಸನ್ಮಾನಿಸಲಾಯಿತು.

ನೆಲ್ಲೂರು ಕೆಮ್ರಾಜೆ ಸೊಸೈಟಿ ಬೆಳ್ಳಿ ಹಬ್ಬದ ಪ್ರಯುಕ್ತ ನ.12ರಂದು ನಡೆದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯು ಇದೇ ಸಂದರ್ಭದಲ್ಲಿ ನಡೆಯಿತು. ವೇದಿಕೆಯಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ನ ನಿರ್ದೇಶಕಿ ಸಾವಿತ್ರಿ ರೈ , ನೆಲ್ಲೂರು ಕೆಮ್ರಾಜೆ‌ ಗ್ರಾ.ಪಂ. ಅಧ್ಯಕ್ಷ ಧನಂಜಯ ಕುಮಾರ್ ಕೋಟೆಮಲೆ, ದ.ಕ.ಜಿಲ್ಲಾ ಸ.ಯೂನಿಯನ್ ಮಂಗಳೂರು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರಣು ಹಿರೇಮಠ , ಸುಳ್ಯ ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ ಮುಖ್ಯ ಅತಿಥಿಯಾಗಿದ್ದರು. ಸೊಸೈಟಿಯ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಹರೀಶ್ ಕಂಜಿಪಿಲಿ ಸ್ವಾಗತಿಸಿದರು. ‌ ಎಲಿಮಲೆ ಪ್ರೌಢಶಾಲೆಯ ಶಿಕ್ಷಕ ಮುರಳೀಧರ ಪುನುಕುಟ್ಟಿ ಮತ್ತು ಕಿರಣ್ ಗುಡ್ಡೆಮನೆ ಕಾರ್ಯಕ್ರಮ ನಿರೂಪಿಸಿದರು.‌ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಉಮೇಶ್ ಪ್ರಭು ಅಥಿತಿಗಳಿಗೆ, ತಾಲೂಕಿನ ವಿವಿಧ ಪ್ರಮುಖ ಸಹಕಾರಿಗಳಿಗೆ ಶಾಲು ಹಾಕಿ ಸ್ವಾಗತಿಸಿದರು. ಕು| ದೃಶ್ಯ ಪ್ರಾರ್ಥಿಸಿದರು.‌ ಉಮೇಶ್ ಪ್ರಭು ವಂದಿಸಿದರು.

ಇದೇ ಸಂದರ್ಭದಲ್ಲಿ 71ನೇ ಅಖಿಲ ಭಾರತೀಯ ಸಹಕಾರಿ ಸಪ್ತಾಹ ಕಾರ್ಯಕ್ರಮ ವನ್ನು ವಹಿಸಿಕೊಂಡ ಕಳಂಜ ಬಾಳಿಲ ಕೃ.ಪ. ಸಹಕಾರಿ ಸಂಘದ ಅಧ್ಯಕ್ಷರಿಗೆ ಧ್ವಜ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ನೆಲ್ಲೂರು ಕೆಮ್ರಾಜೆ ಸೊಸೈಟಿಯ ನಿರ್ದೇಶಕರಾದ ಶುಭಾಕರ ನಾಯಕ್ ಬೊಳ್ಳಾಜೆ, ದೇವಿಪ್ರಸಾದ್ ಸುಳ್ಳಿ, ಸತ್ಯೇಶ್ ಚಂದ್ರೋಡಿ, ಹರೀಶ್ ಸುಳ್ಳಿ, ಚಂದ್ರ ದಾಸನಕಜೆ, ಶ್ರೀಮತಿ ಸಂಧ್ಯಾ ಪುನುಕುಟ್ಟಿ, ತೀರ್ಥಕುಮಾರ ಟಿ., ಡಿಸಿಸಿ ಬ್ಯಾಂಕ್‌ನ ವಲಯ ಮೇಲ್ವಿಚಾರಕರಾದ ಮನೋಜ್ ಕುಮಾರ್, ಬಾಲಕೃಷ್ಣ ಪುತ್ಯ, ನವೋದಯ ಸಂಘದ ತಾಲೂಕು ಮೇಲ್ಚಿಚಾರಕ ಶ್ರೀಧರ ಮಾಣಿಮರ್ಧು ಹಾಗೂ ಸಹಕಾರ ಸಂಘದ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ನೆಲ್ಲೂರು ಕೆಮ್ರಾಜೆ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ್ ಮತ್ತು ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಸದಸ್ಯರು, ಸೊಸೈಟಿಯ ಸದಸ್ಯರುಗಳು‌ ಉಪಸ್ಥಿತರಿದ್ದರು.