ಪೈಕ ಶಾಲೆಯಲ್ಲಿ ಕ್ರೀಡೋತ್ಸವ ಹಾಗೂ ವಾರ್ಷಿಕೋತ್ಸವ,ಸನ್ಮಾನ ಕಾರ್ಯಕ್ರಮ

0

ದ.ಕ.ಜಿ.ಪಂ.ಕಿರಿಯ ಪ್ರಾಥಮಿಕ ಶಾಲೆ ಪೈಕ,ಶಾಲಾ ಹಿರಿಯ ವಿದ್ಯಾರ್ಥಿಗಳು ಹಾಗೂ ಊರ ವಿದ್ಯಾಭಿಮಾನಿಗಳ ಜಂಟಿ ಆಶ್ರಯದಲ್ಲಿ ಡಿ.23 ರಂದು ಕ್ರೀಡೋತ್ಸವ ಹಾಗೂ ವಾರ್ಷಿಕೋತ್ಸವ ,ಸನ್ಮಾನ ಕಾರ್ಯಕ್ರಮ ನಡೆಯಿತು.


ಶಿಕ್ಷಣ ಸಂಸ್ಥೆಯ ನಿವೃತ್ತ ಅಧೀಕ್ಷಕರಾದ ಮುಚ್ಚಾರ ಚಿನ್ನಪ್ಪ ಗೌಡರವರು ಧ್ವಜಾರೋಹಣದ ಮೂಲಕ ಚಾಲನೆ ನೀಡಿದರು.
ಶಾಲಾ ಸ್ಥಳ ದಾನಿಗಳಾದ ಡಿ.ಯಂ.ರಾಮಣ್ಣ ಗೌಡರು ಕಾರ್ಯಕ್ರಮ ಉದ್ಘಾಟಿಸಿದರು.


ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಮಂಜುನಾಥ ಕೆ ಇವರು ವಹಿಸಿದ್ದರು.
ವಿವಿಧ ಸ್ಪರ್ಧೆಗಳು ನಡೆದವು.
ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಸುಮಿತ್ರ ಮೂಕಮಲೆ, ಉಪಾಧ್ಯಕ್ಷರಾದ ಶ್ರೀಮತಿ ಭಾರತಿ ಸಾಲ್ತಾಡಿ, ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಟ್ ವಳಲಂಬೆ, ಜಗದೀಶ್ ಬಾಕಿಲ,ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ನಿರ್ದೇಶಕರಾದ ಮುಳಿಯ ಕೇಶವ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ, ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.
ನಿವೃತ್ತ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮಣಿಯಾನ ಪುರುಷೋತ್ತಮ,ಎಸ್.ಡಿ.ಎಂ.ಸಿ.ಮಾಜಿ ಅಧ್ಯಕ್ಷ ಮಾಧವ ಕೆ, ಅತಿಥಿ ಶಿಕ್ಷಕರಾದ ಕಲಾವತಿ,ಗೀತಾ ಕೆ,ಅಡುಗೆಯವರಾಗಿ ಸೇವೆ ಸಲ್ಲಿಸಿದ ಧನ್ಯ ಕುಮಾರಿ, ಎಸ್.ಎಸ್.ಎಲ್.ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಶ್ರೀಪ್ರಿಯಾ ಪಿ.ಬಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸುಶ್ಮಿತಾ, ರಾಜ್ಯ ಮಟ್ಟದ ಕ್ರೀಡಾಪಟು ಕು.ಯಶಿಕಾ ಎಂ.ಆರ್, ಕಿದು ಸಿ.ಪಿ.ಸಿ.ಆರ್.ಐ ಕಿದುವಿನಲ್ಲಿ ಸರಕಾರಿ ಉದ್ಯೋಗಿ ದುರ್ಗೇಶ್ ಮಣಿಯಾನ, ಉಪವಲಯಾರಣ್ಯಾಧಿಕಾರಿ ಬೃಂದಾ, ಸಂಜೀವಿನಿ ಪ್ರಶಸ್ತಿ ವಿಜೇತೆ ಶ್ರೀಮತಿ ಲೀಲಾವತಿ ಆಚಾರ್ಯ,ಮೆಸ್ಕಾಂ ಇಲಾಖೆಯ ಸುಧಾಕರ ಪಂಜಿಪಳ್ಳ, ಶಾಲೆ ಮತ್ತು ಊರವರ ಪರವಾಗಿ ನೂತನ ಶಾಸಕಿ ಭಾಗೀರಥಿ ಮುರುಳ್ಯರವರನ್ನು ಸನ್ಮಾನಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಸ್ನೇಹಲತಾ ಮಣಿಯಾನ ವರದಿ ವಾಚಿಸಿದರು.
ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯರಾಂ ಪೈಕ, ಎಸ್.ಡಿ.ಎಂ.ಸಿ.ಅಧ್ಯಕ್ಷ ಮಂಜುನಾಥ ಕೆ, ವಿದ್ಯಾರ್ಥಿ ನಾಯಕಿ ಕು.ಮೇಘನಾ ಪಿ, ಉಪಸ್ಥಿತರಿದ್ದರು.
ಇತ್ತೀಚೆಗೆ ನಿಧನರಾದ ನಿವೃತ್ತ ಶಿಕ್ಷಕ ಚಿನ್ನಪ್ಪ ಗೌಡ ಬೊಮ್ಮದೇರೆ ಇವರ ಸ್ಮರಣಾರ್ಥ ದತ್ತಿನಿಧಿ ಯನ್ನು ಇವರ ಮನೆಯವರು ಶಾಲೆಗೆ ನೀಡಿದರು.
ಶಾಲಾ ಮಕ್ಕಳಿಗೆ ಮತ್ತು ಸ್ಲರ್ಧೆಯಯಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯರಾಮ ಪೈಕ ಸ್ವಾಗತಿಸಿ, ಕಿಶೋರ್ ಕುಮಾರ್ ನಿರೂಪಿಸಿ, ಲೋಕೇಶ್ವರ ಡಿ.ಆರ್.ವಂದಿಸಿದರು.
ಊರ ವಿದ್ಯಾಭಿಮಾನಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು.
ಗುತ್ತಿಗಾರು ಗ್ರಾ.ಪಂ.ನೀಡಿದ ಲಸೋಲಾರ್ ದೀಪ, ಕೈ ತೊಳೆಯುವ ಬೇಸಿನ್, ಸ್ಟೀಲ್ ಅಲ್ಮೆರಾವನ್ನು ಉದ್ಘಾಟಿಸಲಾಯಿತು.
ಶಾಲಾ ಕಂಪೌಂಡು ರಚನೆಗೆ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿ ಪೂಜೆ ನೆರವೇರಿಸಿದರು.