ರಾಮಮಂದಿರ ಉದ್ಘಾಟನೆಯನ್ನು ಸಮಭಾವದಿಂದ ಗೌರವಿಸೋಣ : ಟಿ.ಎಂ.ಶಹೀದ್ ಪತ್ರಿಕಾಗೋಷ್ಠಿ

0

”ರಾಮಮಂದಿರ ವಿಚಾರದಲ್ಲಿ ಸುದೀರ್ಘವಾದ ಹೋರಾಟ, ಕಾನೂನು ಚೌಕಟ್ಟು ಹಾಗೂ ನ್ಯಾಯಾಲಯದಲ್ಲಿ ಆದ ತೀರ್ಮಾನವನ್ನು ಎಲ್ಲ ಸಮುದಾಯದ ನಾಯಕರು ಸ್ವಾಗತ ಮಾಡುತ್ತೇವೆ. ಮತ್ತು ರಾಮ ಮಂದಿರ ಉದ್ಘಾಟನೆಯನ್ನು ನಾವೆಲ್ಲರೂ ಸಮಭಾವದಿಂದ ಗೌರವಿಸುತ್ತೇವೆ” ಎಂದು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಹೀದ್ ಹೇಳಿದ್ದಾರೆ.


ಜ.೨೦ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ರಾಮಮಂದಿರ ಉದ್ಘಾಟನೆಯಂತ ಕಾರ್ಯಕ್ರಮಗಳಿಂದ ಜಾತಿ, ಧರ್ಮ, ಪಕ್ಷದೊಳಗೆ ಸೌಹಾರ್ದತೆಯನ್ನು ಸೃಷ್ಠಿ ಮಾಡಬೇಕು. ಎಲ್ಲರೂ ಸಮಭಾವದಿಂದ ಒಬ್ಬರನ್ನೊಬ್ಬರು ಗೌರವಿಸಬೇಕು ಎನ್ನುವುದು ನಮ್ಮ ಆಶಯ. ಗ್ರಾಮೀಣ ಭಾಗದಲ್ಲಿ ದೇವರ ಹೆಸರಿನಲ್ಲಿ ಕೋಮು ಗಲಭೆ, ಅಂಗಡಿ ದ್ವಂಸದಂತಹ ಕೃತ್ಯಗಳು ನಡೆಯುತ್ತಿದೆ. ಯಾವುದೇ ಸಮುದಾಯದವರು ಕೂಡಾ ಈ ರೀತಿ ಮಾಡಬಾರದೆಂದು ನಾವು ಕೇಳಿಕೊಳ್ಳುತ್ತೇವೆ ಎಂದವರು ಹೇಳಿದರು.


ಜ.೨೩ರಂದು ಜನತಾದರ್ಶನ : ಜ.೨೩ರಂದು ಸುಳ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರು ಬಂದು ಜನತಾದರ್ಶನ ನಡೆಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದ ಅವರು, ಸುಳ್ಯದಲ್ಲಿ ಅಲ್ಪ ಸಂಖ್ಯಾತರ ವಸತಿ ಶಾಲೆ ಹಾಗೂ ಹಾಸ್ಟೆಲ್ ಆಗಬೇಕೆಂದು ಈಗಾಗಲೇ ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಸಿದ್ದರಾಮಯ್ಯರ ಸರಕಾರ ಗ್ಯಾರಂಟಿ ಯೋಜನೆಗಳನ್ನು ಮಾಡುವ ಮೂಲಕ ದೇಶಕ್ಕೆ ಮಾದರಿಯಾಗಿದೆ ಎಂದವರು ವಿವರ ನೀಡಿದರು.
ನ.ಪಂ. ಸದಸ್ಯ ಶರೀಫ್ ಕಂಠಿ ಮಾತನಾಡಿ, ಜ.೨೩ರಂದು ಉಸ್ತುವಾರಿ ಸಚಿವರು ಸುಳ್ಯಕ್ಕೆ ಬರುತ್ತಾರೆ. ಆದಿ ನಗರದ ಫಾರಂ ೩ ಸಮಸ್ಯೆಯ ಕುರಿತು ಸಚಿವರ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು. ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂಜಿತ್ ಮೇನಾಲ ಮಾತನಾಡಿಕಾಂಗ್ರೆಸ್ ಸರಕಾರ ೫ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಅಲ್ಲದೆ ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ ಸಂದರ್ಭ ಎಲ್ಲ ದೇವಸ್ಥಾನಗಳಲ್ಲಿ ವೀಶೇಷ ಪೂಜೆ ಸಲ್ಲಿಸಲು ಸರಕಾರ ಸುತ್ತೋಲೆ ನೀಡಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಿದ್ದೀಕ್ ಕೊಕ್ಕೊ, ಪ್ರಕಾಶ್ ಂಏನಾಲ, ಮುಸ್ತಫ ಇದ್ದರು.