ಐವರ್ನಾಡು ದೇವಸ್ಥಾನ ರಸ್ತೆ ಅಗೆದು ಕಾಮಗಾರಿ ಸ್ಥಗಿತ

0

ಐವರ್ನಾಡು ದೇರಾಜೆ ರಸ್ತೆ ಕಾಮಗಾರಿ ಕೆಲಸ ಪ್ರಾರಂಭಗೊಂಡು ಕಾಂಕ್ರೀಟೀರಕಣಕ್ಕಾಗಿ ರಸ್ತೆ ಅಗೆದಿದ್ದು ಕಾಮಗಾರಿ ಸ್ಥಗಿತಗೊಳಿಸಲಾಗಿದೆ.
ರಸ್ತೆ ಅಗೆದು ಹಾಕಿ ಕೆಲವು ದಿನಗಳಾಗಿದ್ದು ಕೆಲಸ ಪ್ರಾರಂಭಮಾಡದೇ ಇರುವುದರಿಂದ ಐವರ್ನಾಡಿನ ನಾಗರಿಕ ಸೇವಾ ಸಮಿತಿಯವರು ಗ್ರಾಮ ಪಂಚಾಯತ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿರುವುದಾಗಿ ತಿಳಿದು ಬಂದಿದೆ.

ಮನವಿಯಲ್ಲಿ ಐವರ್ನಾಡು ದೇರಾಜೆ ರಸ್ತೆ ಕಾಮಗಾರಿ ಕುರಿತು ಈಗಾಗಲೇ ಆ ಪ್ರದೇಶದ ನಾಗರಿಕರು ನಾಗರಿಕ ಸೇವಾ ಸಮಿತಿ, ಐವರ್ನಾಡು, ಸುಳ್ಯ ಇದರ ವತಿಯಿಂದ ಸರ್ವ ಋತು ರಸ್ತೆಗಾಗಿ ಒತ್ತಾಯದ ಹೋರಾಟ ಪ್ರತಿಭಟನಾ ನಡೆಸಿದ್ದಲ್ಲದೆ, ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೆ ಸೂಕ್ತ ಕ್ರಮಕ್ಕೆ ಮನವಿ ಮೂಲಕ ಆಗ್ರಹಿಸಿದ್ದು, ಶಾಸಕರ ಅನುದಾನದಿಂದ ರೂ 27 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಸುವ ಬಗ್ಗೆ ಗ್ರಾಮ ಸಭೆಯಲ್ಲಿ ಭರವಸೆ ಜೊತೆಗೆ ಕಾಮಗಾರಿ ಕೆಲವು ದಿನಗಳ ಹಿಂದೆ ಆರಂಭಿಸಲಾಗಿತ್ತು, ಆದರೆ ಅರ್ಧದಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಕಾಮಗಾರಿ ಸ್ಥಗಿತವಾದುದರಿಂದ ಜನಸಾಮಾನ್ಯರಿಗೆ ನಡೆದಾಡಲು ಸಹ ಅಸಾಧ್ಯವಾದವಾಗಿದೆ ಜನಸಾಮಾನ್ಯರು ಪರದಾಡುವ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ ಈಗಾಗಲೇ ಬಿಡುಗಡೆಯಾಗಿದೆ ಎನ್ನಲಾದ ಅನುಧಾನವಿದ್ದಾಗ್ಯೂ ಕೆಲಸ ಸ್ಥಗಿತ ಗೊಳಿಸಿದ ಬಗ್ಗೆ ಸೂಕ್ತವಾದ ಮಾಹಿತಿ, ಕ್ರಿಯಾಯೋಜನೆ, ಟೆಂಡರ್ ಪ್ರಕ್ರಿಯೆ ದಾಖಲಾತಿ ಒದಗಿಸಿ, ನಿಲ್ಲಿಸಿದ ಕಾಮಗಾರಿ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸೂಕ್ತ ಕ್ರಮಕ್ಕಾಗಿ ಸರ್ವ ನಾಗರಿಕರ ಈ ಮೂಲಕ ಕೋರಿಕೆಯಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿಯವರಲ್ಲಿ ವಿಚಾರಿಸಿದಾಗ ರಸ್ತೆ ಅಗೆದು ಹಾಕಿ ಆ ಕಡೆಗೆ ಹೋಗುವವರಿಗೆ ತೊಂದರೆಯಾಗಿದೆ. ಸುಮಾರು 20 ದಿನ ಆಯ್ತು ರಸ್ತೆ ಅಗೆದು ಹಾಕಿ ವಾಹನ ಸವಾರರಿಗೂ ತೊಂದರೆಯಾಗಿದೆ.


ಸರಕಾರದ ಅನುದಾನ ಮಳೆಹಾನಿ ಯೋಜನೆಯಲ್ಲಿ ರೂ.25 ಲಕ್ಷ ಮತ್ತು ಶಾಸಕರ ಅನುದಾನ 10 ಲಕ್ಷ ಅನುದಾನದಲ್ಲಿ ರಸ್ತೆ ಕಾಂಕ್ರೀಟೀಕರಣವಾಗುತ್ತದೆ. ನಿರ್ಮಿತಿ ಕೇಂದ್ರದ ಮೂಲಕ ಕೆಲಸ ನಡೆಯುತ್ತದೆ.
ಇದೇ ಬುಧವಾರ ಅಥವಾ ಗುರುವಾರ ಕೆಲಸ ಪ್ರಾರಂಭಮಾಡುವುದಾಗಿ ಕಾಂಟ್ರಾಕ್ಟರ್ ತಿಳಿಸಿದ್ದಾರೆ ಎಂದಿದ್ದಾರೆ. ಕಾಂಟ್ರಾಕ್ಟರ್ ಯೋಗೀಶ್ ರವರಲ್ಲಿ ವಿಚಾರಿಸಿದಾಗ ಎರಡು ಮೂರು ದಿನದಲ್ಲಿ ಕೆಲಸ ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದ್ದಾರೆ.