ಕಾಯರ್ತೋಡಿ: ನಡುಮುಟ್ಲು ಉತ್ಸವ ಮಂಟಮೆಯಲ್ಲಿ ಶ್ರೀ ಮಲೆ ದೈವಗಳ ಜಾಲಾಟ

0

ಕಾಯರ್ತೋಡಿಯ ‌ನಡುಮುಟ್ಲು ಉತ್ಸವ ಮಂಟಮೆಯಲ್ಲಿ ಶ್ರೀ ಮಲೆ ದೈವಗಳ ಜಾಲಾಟ ಮಹೋತ್ಸವವು ಮಾ.23ರಿಂದ 25ರವರೆಗೆ ಜರುಗಿತು.

ಮಾ‌.23ರಂದು ರಾತ್ರಿ ಕುದಿ ಹಾಕುವ ಕಾರ್ಯಕ್ರಮ ನಡೆಯಿತು. ಮಾ.24ರಂದು ರಾತ್ರಿ ದೇಂಗೋಡಿ ದೈವ ಚಾವಡಿಯಿಂದ ಕೀಲಾರು ಭಂಡಾರ ಉತ್ಸವ ಮಂಟಮೆಗೆ ಹೋಗುವ ಕಾರ್ಯಕ್ರಮ ಜರುಗಿತು.

ಮಾ.25ರಂದು ಬೆಳಿಗ್ಗಿನಿಂದ ಸಾಯಂಕಾಲದ ತನಕ ಮಲೆದೈವಗಳ ನೇಮಾವಳಿ, ಹರಕೆ ಪ್ರಸಾದ ವಿತರಣೆ ನಡೆಯಿತು. ಬಳಿಕ ದೈವದ ಭಂಡಾರವನ್ನು ದೈವ ಚಾವಡಿಗೆ ತಂದು ಉತ್ಸವವು ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.