ಎ. 1 ರಂದು ಕೆ.ಎಫ್.ಡಿ.ಸಿ.ಉದ್ಯೋಗಿ ಯೋಗನಾಥನ್ ಪೈಲಾರು ನಿವೃತ್ತಿ

0

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಉದ್ಯೋಗಿ ಅಮರಮುಡ್ನೂರು ಗ್ರಾಮದ ಪೈಲಾರು ನಿವಾಸಿ ಯೋಗನಾಥನ್ ರವರು ಎ.1 ರಂದು ವೃತ್ತಿಯಿಂದ ನಿವೃತ್ತಿಯಾಗಲಿದ್ದಾರೆ.
1979 ರಲ್ಲಿ ಕೆ.ಎಫ್.ಡಿ.ಸಿ ಯಲ್ಲಿ ಉದ್ಯೋಗಕ್ಕೆ ಸೇರ್ಪಡೆಗೊಂಡು ಮೇದಿನಡ್ಕ, ಐವರ್ನಾಡು, ಸೋಣಂಗೇರಿ ಹಾಗೂ ದುಗಲಡ್ಕ ಮುಂತಾದ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ. ಸುದೀರ್ಘ 45 ವರ್ಷಗಳ ಕಾಲ ಪ್ರಾಮಾಣಿಕ ಸೇವೆ ಸಲ್ಲಿಸಿ ವೃತ್ತಿಯಿಂದ ನಿವೃತ್ತಿ ಹೊಂದಲಿದ್ದಾರೆ.
ಇವರು ಪ್ರಸ್ತುತ ಪತ್ನಿ ಶ್ರೀಮತಿ ಸರೋಜಾ .ವೈ ಮತ್ತು ಪುತ್ರ ಮಧುಚಂದ್ರ ವೈ ಯವರೊಂದಿಗೆ ವಾಸವಾಗಿದ್ದಾರೆ.