ಹಳೆಗೇಟು ಎಸ್ ಕೆ ಕಾಂಪೌಂಡ್ ಪರಿಸರದಲ್ಲಿ ಕಳೆದ ಹತ್ತು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ

0

ಬೋರ್ವೆಲ್ ನಲ್ಲಿ ನೀರು ಇಂಗಿರುವ ಕಾರಣ ಸಮಸ್ಯೆ ಎದುರಾಗಿದೆ, ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ :ನ.ಪಂ. ಮುಖ್ಯಾಧಿಕಾರಿ

https://sullia.suddinews.com/?p=725546(opens in a new tab)

ಸುಳ್ಯದ ಹಳೆಗೇಟು ಬಳಿಯ ಎಸ್.ಕೆ. ಕಾಂಪೌಂಡ್ ಪರಿಸರದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಮನೆಗಳಿಗೆ ಕಳೆದ ಹತ್ತು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಕಾರಣದಿಂದಾಗಿ ಸ್ಥಳೀಯ ನಿವಾಸಿಗಳು ನೀರಿಗಾಗಿ ಸಂಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಕೂಡಲೇ ಸರಿಪಡಿಸಿಕೊಡುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ವಿನಂತಿಸಿಕೊಂಡಿದ್ದಾರೆ.
ಇದರ ಬಗ್ಗೆ ನಗರ ಪಂಚಾಯತ್ ಮುಖ್ಯ ಅಧಿಕಾರಿ ಬಿ ಎಂ ಡಾಂಗೆರವರ ಬಳಿ ಮಾಹಿತಿ ಪಡೆದಾಗ ಈ ಭಾಗಕ್ಕೆ ನೀರು ಮಿಲಿಟರಿ ಕ್ವಾರ್ಟರ್ಸ್ ಬಳಿ ಇರುವ ಬೋರ್ವೆಲ್ನಿಂದ ಒದಗಿಸಲಾಗುತ್ತಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಬೋರ್ವೆಲ್ ನಲ್ಲಿ ನೀರು ಹಿಂಗಿರುವ ಕಾರಣ ಅಲ್ಲದೆ ನಗರ ಪ್ರದೇಶದಲ್ಲಿ ನಡೆದ ನೂತನ ಪೈಪುಗಳ ಅಳವಡಿಕೆಯ ಸಂದರ್ಭ ಮೈನ್ ಪೈಪಿನಲ್ಲಿ ಸಮಸ್ಯೆ ಆದ ಕಾರಣ ಈ ಭಾಗಕ್ಕೆ ನೀರಿಗೆ ತೊಂದರೆ ಆಗಿದೆ. ಆದರೆ ನಗರ ಪಂಚಾಯತಿ ವತಿಯಿಂದ ಟ್ಯಾಂಕರ್ ನಲ್ಲಿ ನೀರು ಒದಗಿಸುವ ಕಾರ್ಯವನ್ನು ಮಾಡಲಾಗುತ್ತಿದೆ.ಆದಷ್ಟು ಶೀಘ್ರದಲ್ಲಿ ಸಮಸ್ಯೆಯನ್ನು ಸರಿಡಿಸುವ ಕಾರ್ಯ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.