ಸೋನಾ ಆಡ್ಕಾರ್ ಗೆ ರೋಟರಿ ಕ್ಲಬ್ ವತಿಯಿಂದ ಸನ್ಮಾನ

0

ಸೋನಾ ಆಡ್ಕಾರ್ ಗೆ ರೋಟರಿ ಕ್ಲಬ್ ವತಿಯಿಂದ ಸನ್ಮಾನ ಕಾರ್ಯಕ್ರಮವು ಎಪ್ರಿಲ್ 17ರಂದು ನಡೆಯಿತು.
ಸೋನಾ ಅಡ್ಕಾರ್ ನಾಲ್ಕನೇ ವರ್ಷದಿಂದ ನೃತ್ಯ, ಹುಲಿವೇಷ ಕುಣಿತ, ಡ್ರಾಯಿಂಗ್, ಯೋಗಭ್ಯಾಸ ಮತ್ತು ಪ್ರದರ್ಶನ ಹೀಗೆ ಇವರ ಹಲವಾರು ಪ್ರತಿಭೆಗಳನ್ನು ಗುರುತಿಸಿ ರೋಟರಿ ರಾಜ್ಯಪಾಲರಿಂದ ಮತ್ತು ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರ ಉಪಸ್ಥಿತಿಯಲ್ಲಿ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.


ಸುಳ್ಯ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ. ಜಾಲ್ಸೂರು ಗ್ರಾಮದ ಅಡ್ಕಾರ್ ಮನೆತನದ ಶರತ್ ಅಡ್ಕಾರ್ ಮತ್ತು ಶೋಭಾ ಶರತ್ ರವರ ಪುತ್ರಿ. ಈಕೆ ನೃತ್ಯಭ್ಯಾಸವನ್ನು ಸಂತೋಷ್ ಮತ್ತು ತರುಣ್ ರಾಜ್ ರವರಿಂದ, ಹುಲಿ ಕುಣಿತವನ್ನು ತರುಣ್ ರಾಜ್ ಮಂಗಳೂರು ರವರಿಂದ, ಯೋಗಭ್ಯಾಸವನ್ನು ಸಂತೋಷ್ ಮುಂಡೋಕಜೆಯವರಿಂದ ಪಡೆಯುತ್ತಿದ್ದಾಳೆ.