ಸುಳ್ಯ: ನೆಕ್ಸಾ ಕಾರುಗಳ ಪ್ರದರ್ಶನ ಮಳಿಗೆ ಶುಭಾರಂಭ

0

ಮಾರುತಿ ಸುಝುಕಿ ಸಂಸ್ಥೆಯ ನೆಕ್ಷಾ ಕಾರುಗಳ ಪ್ರದರ್ಶನ ಮಳಿಗೆ ಮೇ. 2ರಂದು ಸುಳ್ಯದ ಓಡಬಾಯಿಯ ಮಾಂಡೋವಿ ಶೋರೂಂನ ಮುಂಭಾಗದಲ್ಲಿ ಶುಭಾರಂಭಗೊಂಡಿತು.
ಶ್ರೀಮತಿ ಶಶಿಕಲಾ ಶುಭಕರ ರಾವ್ ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ವಿ.ಜೆ. ವಿಖ್ಯಾತ್ ಭಾಗವಹಿಸಿದ್ದರು. ಅರೇನಾ ಸೇಲ್ಸ್ ಎ.ಜಿ.ಎಂ. ಅಕ್ಷಯ್ ಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವಿನೋದ್ ಲಸ್ರಾದೋ, ಸುದ್ದಿ ವರದಿಗಾರ ಈಶ್ವರ ವಾರಣಾಶಿ, ಸಂಸ್ಥೆಯ ಸೇಲ್ಸ್ ಮ್ಯಾನೇಜರ್ ಮೀನ ರೇಗೋ, ಸುಳ್ಯ ಅರೇನಾ ಸರ್ವೀಸ್ ಮ್ಯಾನೇಜರ್ ಸುದೇಶ್ ಜೈನ್, ಸುಳ್ಯ ಅರೇನಾ ಸಹಾಯಕ ಸೇಲ್ಸ್ ಮ್ಯಾನೇಜರ್ ಸುರೇಶ್ ಭಟ್ ಸೇರಿದಂತೆ ನೆಕ್ಸಾ ಮತ್ತು ಅರೇನಾ ಸೇಲ್ಸ್ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.