ಪಡ್ಪಿನಂಗಡಿಯಲ್ಲಿ ಸರಣಿ ಅಪಘಾತ: ‌ಕಾರುಗಳು ಜಖಂ

0

ರಸ್ತೆಯಲ್ಲಿ ಸತ್ತಿದ್ದ ಬೆಕ್ಕನ್ನು ಕಂಡು ಬ್ರೇಕ್ ಹಾಕಿದ ಪರಿಣಾಮ ಎರಡು ಕಾರು ಜಖಂ ಗೊಂಡ ಘಟನೆ ಮೇ.2 ರಂದು ಸಂಜೆ ಪಡ್ಪಿನಂಗಡಿಯಿಂದ ವರದಿಯಾಗಿದೆ.

ಪಡ್ಪಿನಂಗಡಿ ಮುಖ್ಯ ರಸ್ತೆಯಲ್ಲಿ ನಿಂತಿಕಲ್ಲು ಕಡೆ ಹೋಗುತ್ತಿದ್ದ ಕಾರು ರಸ್ತೆಯಲ್ಲಿ ಸತ್ತು ಬಿದ್ದಿದ್ದ ಬೆಕ್ಕನ್ನು ಕಂಡು ಅದನ್ನು ತಪ್ಪಿಸಲು ಬ್ರೇಕ್ ಹಾಕಿ ಕಾರನ್ನು ನಿದನ ಗೊಳಿಸಿದಾಗ ಹಿಂದಿನಿಂದ ಬರುತ್ತಿದ್ದ ಪಿಕಪ್ ವಾಹನ ಕಾರಿಗೆ ಡಿಕ್ಕಿ ಹೊಡೆಯಿತು. ಕಾರು ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಕಾರು ಹೆಚ್ಚಿನ ಪ್ರಮಾಣದ ಜಖಂ ಗೊಂಡಿದೆ. ಎದುರಿನಿಂದ ಬಂದ ಕಾರಿನ ಒಂದು ಬದಿಗೆ ಹಾನಿಯಾಗಿದೆ.