ಸುಳ್ಯದ ಬಾಳೆಮಕ್ಕಿಯಲ್ಲಿ ಕಾರು-ಬೈಕ್ ಡಿಕ್ಕಿ, ಬೈಕ್ ಸವಾರನ ಕಾಲಿಗೆ ಗಾಯ

0


ಸುಳ್ಯದ ಬಾಳೆಮಕ್ಕಿ ಸಮೀಪ ಕಾರು ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರನ ಕಾಲಿಗೆ ಗಾಯಗಳಾದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.
ಕಲ್ಲುಮುಟ್ಲು ನಿವಾಸಿ ದಿಲೀಪ್ ಎಂಬಾತ ಸುಳ್ಯ ಕಡೆಗೆ ಬರುತ್ತಿದ್ದ ಸಂದರ್ಭ ವಿರುದ್ಧ ದಿಕ್ಕಿನಿಂದ ಬಂದ ಕಾರು ಪರಸ್ಪರ ಡಿಕ್ಕಿ ಹೊಡೆಯಿತು.

ಪರಿಣಾಮ ಬೈಕ್ ಸವಾರನ ಕಾಲಿಗೆ ಗಾಯಗಳಾಯಿತು.

ಗಾಯಾಳುವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕಾಲಿನ ಬೆರಳುಗಳು ಜಖಂಗೊಂಡ ಕಾರಣ ಪ್ರಥಮ ಚಿಕಿತ್ಸೆಯ ಬಳಿಕ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.