ಏರ್ ಟೆಲ್ ಶೋ ರೂಂ ನಲ್ಲಿ ಯುವತಿಯ ಫೋಟೊ ತೆಗೆದ ಪ್ರಕರಣ

0

ಪೋಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು : ಇಲ್ಲವಾದರೆ ಸಂಘಟನೆಯ ವತಿಯಿಂದ ಹೋರಾಟ

ವಿ.ಹಿಂ.ಪ – ಭಜರಂಗದಳ ಪತ್ರಿಕಾಗೋಷ್ಠಿ

ಎ.6ರಂದು ಸುಳ್ಯದ ಏರ್ ಟೆಲ್ ಶೋ ರೂಂ ನಲ್ಲಿ ಯುವತಿಯ ಫೋಟೊ ಕ್ಲಿಕ್ಕಿಸಿದ ಪ್ರಕರಣವನ್ನು ಪೋಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗೆ ಕಠಿಣ ಶಿಕ್ಷೆಯ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಸಂಘಟನೆಯ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ವಿ.ಹಿಂ.ಪ. ಸಂಚಾಲಕ ಸೋಮಶೇಖರ್ ಪೈಕ, ಭಜರಂಗದಳ ತಾಲೂಕು ಸಂಚಾಲಕ ಹರಿಪ್ರಸಾದ್ ಬಿ.ವಿ ಹಾಗೂ ನಗರ ಸಂಚಾಲಕ ವರ್ಷಿತ್ ಚೊಕ್ಕಾಡಿ ಹೇಳಿದ್ದಾರೆ.

ಎ.7ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಸೋಮಶೇಖರ್ ಪೈಕರವರು “ಯುವತಿಯ ಫೋಟೊ ತೆಗೆದು ಬಳಿಕ ಬ್ಲ್ಯಾಕ್ ಮೆಲ್ ಮಾಡುವ ತಂತ್ರ ನಿನ್ನೆ ನಡೆದಿದೆ. ಆ ಕಚೇರಿಯಲ್ಲಿ ಸಿಸಿ ಕ್ಯಾಮರಾ ಇರಬೇಕಾದುದು ನಿಯಮ. ಆದರೆ ಇಲ್ಲಿ ಯಾಕೆ ಅಳವಡಿಸಿಲ್ಲ. ಇಂತ ಘಟನೆ ಬೇರೆ ಕಡೆ ಆಗುತ್ತಿರುವುದು ಕೇಳಿದ್ದೆವು. ಈಗ ಸುಳ್ಯದಲ್ಲೇ ನಡೆದಿರುವುದು ಆತಂಕಕಾರಿ. ಘಟನೆಯನ್ನು ನಾವು ಖಂಡಿಸುತ್ತೇವೆ ಮತ್ತು ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದವರು ಒತ್ತಾಯಿಸಿದರು.

ವರ್ಷಿತ್ ಚೊಕ್ಕಾಡಿ ಮಾತನಾಡಿ, ಆ ಯುವತಿಗೆ ಫೋಟೊ ತೆಗೆದ ವಿಚಾರ ಗೊತ್ತಾದ ಕೂಡಲೇ ಆಕೆ ಆಕ್ಷೇಪಿಸಿ, ತನ್ನ ಮನೆಯವರಿಗೆ ತಿಳಿಸಿದ್ದಾರೆ. ಪೋಲೀಸ್ ಠಾಣೆಗೆ ದೂರು ಕೊಡಲು ತೆರಳಿದಾಗ ಪೋಲೀಸರು ಆ ಯುವತಿಯ ಮನೆಯವರ ಲ್ಲಿ ಇದು ಕೇಸಾದರೆ ಕೋರ್ಟ್ ಗೆ ಅಲೆದಾಡಬೇಕೆಂದು ಹೇಳುತ್ತಾರೆ. ಪೋಲೀಸರು ಈ ರೀತಿ ಹೇಳುವುದು ಸರಿಯಲ್ಲ. ಕೊಟ್ಟ ದೂರು ದಾಖಲಿಸಿ, ಸಂತ್ರಸ್ಥೆಗೆ‌ನ್ಯಾಯ ಕೊಡಿಸಬೇಕು. ಆರೋಪಿಗೆ ಕಠಿಣ ಶಿಕ್ಷೆ ಆಗುವಂತಾಗಬೇಕು. ರಾತ್ರಿ ಒಂದೂವರೆ ಗಂಟೆ ತನಕ ಎಫ್ ಐ ಆರ್ ದಾಖಲು ಮಾಡಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಪೋಲೀಸ್ ವರಿಷ್ಢಾಧಿಕಾರಿಗಳು ಕೂಡಾ ಗಮನ ಹರಿಸಬೇಕು” ಎಂದು ಹೇಳಿದರು.

ಹರಿ ಪ್ರಸಾದ್ ಎಲಿಮಲೆ ಮಾತನಾಡಿ “ಮೊಬೈಲ್ ರೀ ಚಾರ್ಚ್ ಮಾಡಲು ಹೋದ ಯುವತಿಯ ಫೋಟೊ ತೆಗೆಯುವ ಅವಶ್ಯಕತೆ ಏನಿತ್ತು. ಈ ಘಟನೆಯನ್ನು ಗಂಭೀರವಾಗಿ ಇಲಾಖೆ ಪರಿಗಣಿಸಿ, ಸೂಕ್ತ ತನಿಖೆ ನಡೆಸಬೇಕು. ಪೋಲೀಸ್ ಇಲಾಖೆ ನಿರ್ಲಕ್ಷ್ಯ ತೋರಿದರೆ ಸಂಘಟನೆಯ ವತಿಯಿಂದ ಠಾಣೆಯ ಎದುರು ಹೋರಾಟ ನಡೆಸಲಾಗುವುದು. ಮತ್ತು ಮುಂದೆ ಈ ರೀತಿಯ ಘಟನೆ ಮರುಕಳಿಸ ಬಾರದು. ಎಲ್ಲ ಮೊಬೈಲ್ ಅಂಗಡಿಯ ಎದುರು ಸಿಸಿ ಕ್ಯಾಮರಾ ಅಳವಡಿಕೆಗೆ ಸೂಚನೆ ನೀಡಬೇಕೆಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಿ.ಹಿಂ.ಪ ಉಪಾಧ್ಯಕ್ಷ ಮನೋಜ್ ಕುಮಾರ್, ದೀಕ್ಷಿತ್ ಪಾನತ್ತಿಲ, ರೂಪೇಶ್ ಪೂಜಾರಿಮನೆ, ರೋಹಿತ್ ಹೊದ್ದೆಟ್ಟಿ ಇದ್ದರು.