ಕದಿಕಡ್ಕ ಅಂಗನವಾಡಿಯಲ್ಲಿ ಮಕ್ಕಳಿಗೆ ಬೀಳ್ಕೊಡುಗೆ

0

ಜಾಲ್ಸೂರಿನ ಕದಿಕಡ್ಕ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭ ಮೇ 8 ರಂದು ನಡೆಯಿತು.

ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಜಲಜಾಕ್ಷಿ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ರಚನಾ, ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಸರಸ್ವತಿ, ಶ್ರೀಮತಿ ಲೀಲಾವತಿ, ಮರಸಂಕ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಕುಮಾರಿ, ಬಾಲವಿಕಾಸ ಸಮಿತಿ ಸದಸ್ಯ ಶೇಖರ ಕಾಳಮ್ಮನೆ, ಕದಿಕಡ್ಕ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಗಿರಿಜಾ ಉಪಸ್ಥಿತರಿದ್ದು ಮಕ್ಕಳ ಮುಂದಿನ ಬದುಕಿಗೆ ಶುಭ ಹಾರೈಸಿದರು.

ಶ್ರೀಮತಿ ಗಿರಿಜಾ ಸ್ವಾಗತಿಸಿ, ಅಂಗನವಾಡಿ ಸಹಾಯಕಿ ಶ್ರೀಮತಿ ಪ್ರೇಮ ವಂದಿಸಿದರು.

ಮಕ್ಕಳ ಪೋಷಕರು ನೀಡಿದ ಕೊಡುಗೆಗಳನ್ನು ಸ್ವೀಕರಿಸಲಾಯಿತು.