ಕೆ.ಪಿ.ಎಸ್ ಗಾಂಧಿನಗರ ಪ್ರೌಢಶಾಲೆಗೆ ಶೇ.100 ಫಲಿತಾಂಶ

0

ಕೆ. ಪಿ. ಎಸ್ ಗಾಂಧಿನಗರ ಪ್ರೌಢಶಾಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 32 ವಿದ್ಯಾರ್ಥಿಗಳಲ್ಲಿ 32 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಶೇಕಡಾ 100 ಫಲಿತಾಂಶ ದಾಖಲಾಗಿರುತ್ತದೆ.
ಇಬ್ಬರು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲೂ 15ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಬೋರುಗುಡ್ಡೆ ಕುಂಞ ಕೋಯ ತಂಙಳ್ ಹಾಗೂ ತಾಹಿರಾ ಬೀವಿ ದಂಪತಿಗಳ ಪುತ್ರಿ ಫಾತಿಮತ್ ತಂಸೀ ಹಬೀವಿ 557 ಅಂಕ ಪಡೆದು ಪ್ರಥಮ ಸ್ಥಾನ ಮತ್ತು ಪೈಂಬೆ ಚಾಲು ಟಿ.ಎಂ ಇಬ್ರಾಹಿಂ ಮತ್ತು ಜಮಿಲ ದಂಪತಿಗಳ ಪುತ್ರಿ ಅಸ್ಲೇಮಿಯಾ ಟಿ ಐ 533ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿರುತ್ತಾಳೆ.