ಪಂಜ: ಎಸ್ .ಎಸ್.ಎಲ್.ಸಿ ಶೇ.91.30 ಫಲಿತಾಂಶ

0

ಪಂಜ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ 23 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 2 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು ಶೇ.91.30 ಉತ್ತಮ ಫಲಿತಾಂಶ ಬಂದಿರುತ್ತದೆ.

14 ಹುಡುಗರಲ್ಲಿ 12 ಹುಡುಗರು ಮತ್ತು 9 ಹುಡುಗಿಯರಲ್ಲಿ 9 ಹುಡುಗಿಯರು ತೇರ್ಗಡೆಯಾಗಿದ್ದಾರೆ.

ಐವತ್ತೊಕ್ಲು ಗ್ರಾಮದ ಕಂರ್ಬುನೆಕ್ಕಿಲ ಹೊನ್ನಪ್ಪ ಗೌಡ ಮತ್ತು ಶ್ರೀಮತಿ ಭಾರತಿ ದಂಪತಿಗಳ ಪುತ್ರ ಪ್ರಖ್ಯಾತ್ ಯಚ್ ಯನ್ 551 , ಪಂಬೆತ್ತಾಡಿ ಗ್ರಾಮದ ಗಣೇಶ್ ಜೋಯಿಸ ಮತ್ತು ಶ್ರೀಮತಿ ಶುಭಾ ಶಂಕರಿ ದಂಪತಿಗಳ ಪುತ್ರ ಸುಮುಖರಾಮ ಶರ್ಮ ಕೆ 534 ಅಂಕ ಪಡೆದು ‘ಎ’ ಗ್ರೇಡ್ ನಲ್ಲಿ ಅತೀ ಹೆಚ್ಚು ಅಂಕ ಗಳಿಸಿದವರು.