ಎಸ್.ಎಸ್.ಎಲ್.ಸಿ. : ಸುಳ್ಯ ತಾಲೂಕಿಗೆ 96.83 ಫಲಿತಾಂಶ

0

ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟಗೊಂಡಿದ್ದು ಸುಳ್ಯ ತಾಲೂಕಿಗೆ ಶೇ.96.83 ಫಲಿತಾಂಶ ದಾಖಲಾಗಿದೆ.

ತಾಲೂಕಿನ 36 ಪ್ರೌಢಶಾಲೆಯ ಪೈಕಿ 18 ಪ್ರೌಢ ಶಾಲೆಗಳು ಶೇ.100 ಫಲಿತಾಂಶ ಪಡೆದುಕೊಂಡಿದೆ.

ಹರಿಹರ ಪಲ್ಲತಡ್ಕ ಸರಕಾರಿ ಪ್ರೌಢಶಾಲೆ, ಮರ್ಕಂಜ ಸರಕಾರಿ ಪ್ರೌಢಶಾಲೆ, ಗಾಂಧಿನಗರ ‌ಕೆಪಿಎಸ್, ಎಡಮಂಗಲ ಸರಕಾರಿ ಪ್ರೌಢಶಾಲೆ, ಐವರ್ನಾಡು ಸರಕಾರಿ ಪ್ರೌಢಶಾಲೆ, ಸಂಪಾಜೆ ಆರ್.ಎಂ.ಎಸ್. ಎ, ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ, ಶ್ರೀ ಶಾರದಾ ಮಹಿಳಾ ಹೆಮ್ಮಕ್ಕಳ ಪ್ರೌಢಶಾಲೆ, ರೋಟರಿ ವಿದ್ಯಾಸಂಸ್ಥೆ ಸುಳ್ಯ, ಕುಮಾರಸ್ವಾಮಿ ವಿದ್ಯಾಸಂಸ್ಥೆ ಸುಬ್ರಹ್ಮಣ್ಯ, ಸ್ನೇಹ ಪ್ರೌಢಶಾಲೆ ಸುಳ್ಯ, ಸವೇರಾಪುರ ಕಲ್ಲುಗುಂಡಿ, ಗ್ರೀನ್ ವ್ಯೂ ಸುಳ್ಯ, ಕೆ.ಎಸ್.ಜಿ. ನಿಂತಿಕಲ್ಲು, ಬ್ಲೆಸ್ಡ್ ಕುರಿಯಾ ಕೋಸ್ ಗುತ್ತಿಗಾರು, ಜ್ಞಾನದೀಪ ಎಲಿಮಲೆ, ವಿವೇಕಾನಂದ ಪ್ರೌಢಶಾಲೆ ವಿನೋಬಾನಗರ, ತೆಕ್ಕಿಲ್ ಗೂನಡ್ಕ ಬೀಜದಕಟ್ಟೆ ಶೇ.100 ಫಲಿತಾಂಶ ದಾಖಲಿಸಿಕೊಂಡಿದೆ.