ಅರಂತೋಡು ಎನ್.ಎಂ.ಪಿ.ಯು.ಸಿ.: ಶೇ.96.36

0

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಶೇ.96.36 ಫಲಿತಾಂಶ ದಾಖಲಿಸಿಕೊಂಡಿದೆ.

ಪರೀಕ್ಷೆಗೆ 60 ಹುಡುಗರು ಹಾಗೂ 50 ಹುಡುಗಿಯರು ಸೇರಿ ಒಟ್ಟು 110 ಮಂದಿಯಲ್ಲಿ 57 ಹುಡುಗರು ಹಾಗೂ 49 ಹುಡುಗಿಯರು ಸೇರಿ ಒಟ್ಟು 106 ಮಂದಿ ಪಾಸಾಗಿದ್ದಾರೆ. 10 ಮಂದಿ ಡಿಸ್ಟಿಂಕ್ಷನ್‌ನಲ್ಲಿ, ೬೫ ಮಂದಿ ಪ್ರಥಮ ಶ್ರೇಣಿ ಹಾಗೂ 22 ಮಂದಿ ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.


ತೊಡಿಕಾನ ಜಯರಾಮ ಬಿ.ಜಿ. – ಹರಿಣಾಕ್ಷಿ ಬಿ ದಂಪತಿ ಪುತ್ರ ವಿಜೇತ್ ಬಿ.ಜೆ. (585), ಅರಂತೋಡು ಹರೀಶ ಡಿ – ತೇಜಾಕ್ಷಿ ದಂಪತಿ ಪುತ್ರಿ ಗ್ರೀನಿ ಡಿ.ಎಚ್. (584), ಪೆರಾಜೆ ಚಿನ್ನಪ್ಪ ಕೆ – ಲಕ್ಷ್ಮೀ ದಂಪತಿ ಪುತ್ರಿ ದೀಪ್ತಿ ಕೆ.ಸಿ. (578), ಸಂಪಾಜೆ ರೋಹಿತಾಕ್ಷ – ಜಯಂತಿ ದಂಪತಿ ಪುತ್ರಿ ಧನುಶ್ರೀ ಡಿ (572), ಪೆರಾಜೆ ಸುರೇಶ ಎಂ.ಎಸ್. – ಯಶೋದಾ ದಂಪತಿ ಪುತ್ರಿ ಸುಪ್ರಿಯಾ ಎಂ.ಎಸ್. (565), ಆಲೆಟ್ಟಿ ಶೇಷಪ್ಪ ಮೂಲ್ಯ – ಶೋಭಾ ದಂಪತಿ ಪುತ್ರಿ ಮನ್ವಿತಾ (557), ಅರಂತೋಡು ಸುಕುಮಾರ ಎಂ.ಬಿ. – ಬೇಬಿ ರೇಖಾ ದಂಪತಿ ಪುತ್ರಿ ಕೃತಿ ಎಂ.ಎಸ್. (555), ತೊಡಿಕಾನ ಸಂಜೀವ – ಗೀತಾ ದಂಪತಿ ಪುತ್ರಿ ಚರಿಷ್ಮಾ ಪಿ.ಎಸ್. (549), ಅರಂತೋಡು ಈಶ್ವರ ಜಿ – ನಯನ ಜಿ ದಂಪತಿ ಪುತ್ರಿ ಪೂಜಾ ಜಿ.ಈ (543), ಅರಂತೋಡು ಜನಾರ್ದನ ಕೆ.ಎ. – ಹೊನ್ನಮ್ಮ ಕೆ.ಜೆ. ದಂಪತಿ ಪುತ್ರ ಮನೀಷ್ ಕೆ.ಜೆ (532) ಅಂಕ ಪಡೆದು ಡಿಸ್ಟಿಂಕ್ಷನ್ ಗಳಿಸಿದ್ದಾರೆ.