ಅಲೆಕ್ಕಾಡಿಯಲ್ಲಿ ಮಲೆನಾಡು ಗಿಡ್ಡ ಸಂರಕ್ಷಣಾ ಮತ್ತು ಸಂವರ್ಧನಾ ಅಭಿಯಾನದ ಕುರಿತು ಮಾಹಿತಿ

0

ಗೋ ಪೂಜೆ ಕಾರ್ಯಕ್ರಮ ; ಗೋಗ್ರಾಸದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ

ಮನೆ ಮನೆಯಲ್ಲಿ ಮಲೆನಾಡು ಗಿಡ್ಡ ತಳಿ ಸಾಕುವ ಮನೋ ಭೂಮಿಕೆ ಬೆಳೆಯಲಿ : ಭಾಗೀರಥಿ ಮುರುಳ್ಯ

ಮಲೆನಾಡು ಗಿಡ್ಡ ದೇಶೀ ತಳಿಯ ಸಂರಕ್ಷಣೆ ಮತ್ತು ಸಂವರ್ಧನೆಯ ನಿಟ್ಟಿನಲ್ಲಿ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನ ಮತ್ತು ಮಾಹಿತಿ ಕಾರ್ಯಕ್ರಮವು ಅಲೆಕ್ಕಾಡಿಯ ಅಕ್ಷಯ ಆಳ್ವರ ಮನೆಯಲ್ಲಿ ಆರಂಭಗೊಂಡಿದೆ.

ಶಾಸಕಿ ಭಾಗೀರಥಿ ಮುರುಳ್ಯ ದೀಪ ಪ್ರಜ್ವಲನೆ ಮಾಡಿದರು. ಅತಿಥಿಗಳು ಗೋ ಗ್ರಾಸ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗದ್ದೆ ಗಳು ಮರೆಯಾಗಿ ತೋಟಗಳು ಬಂದಾಗ ಜಾನುವಾರುಗಳ ಸಂಖ್ಯೆಯೂ ಕ್ಷೀಣಿಸಿತು. ಮನೆ ಮನೆಯಲ್ಲಿ ಮಲೆನಾಡು ಗಿಡ್ಡ ತಳಿ ಸಾಕುವ ಮನೋ ಭೂಮಿಕೆ ಬೆಳೆಯಲು ಈ ಕಾರ್ಯಕ್ರಮ ಕಾರಣವಾಗಲಿ ಎಂದು ಶಾಸಕರು ಹಾರೈಸಿದರು.

ಸುಳ್ಯದ ಗೋಶಾಲೆಯನ್ನು ಪಶು ಸಂಗೋಪನಾ ಇಲಾಖೆ ಮತ್ತು ಪ್ರಣವ ಪೌಂಡೇಶನ್ ಮೂಲಕ ಅಭಿವೃದ್ಧಿ ಪಡಿಸುವ ಕಾರ್ಯ ನಡೆಯಲಿದೆ ಎಂದ ಶಾಸಕರು , ನಾನು ಕೂಡಾ ದನ ಸಾಕುವವಳೇ. ಗೋವುಗಳ ಋಣವೂ ನನ್ನ ಮೇಲಿದೆ ಎಂದರು.

ಕೃಷಿ ತಜ್ಞ ಮರಿಕೆ ಎ.ಪಿ. ಸದಾಶಿವ ಭಟ್‌ರವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗೋಪಾಲನಾ ಟ್ರಸ್ಟ್ ಅಧ್ಯಕ್ಷ , ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ, ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ, ಸಾಮಾಜಿಕ ಧುರೀಣ ಸಾಜ ರಾಧಾಕೃಷ್ಣ ಆಳ್ವ, ಮಾಜಿ ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ ಭಾಗವಹಿಸಿದ್ದರು. ಕೆರೆ ಪುನಶ್ಚೇತನ ಆಂದೋಲನದ ಎಂ.ಆರ್. ಮಂಜುನಾಥ್ ಮಳವಳ್ಳಿ ಮಾತನಾಡಿದರು.

ಅರುಂಧತಿ ಕೋಟೆ ಪ್ರಾರ್ಥಿಸಿದರು. ಕಾರ್ಯಕ್ರಮದ ರೂವಾರಿ ಅಕ್ಷಯ ಆಳ್ವ ಸ್ವಾಗತಿಸಿ ಪ್ರಸ್ತಾವನೆಗೈದರು. ಡಾ. ಸುಂದರೇಶ್ ಮನವಿ ಪತ್ರ ವಾಚಿಸಿದರು. ಅಭಿಯಾನ ಬಳಗದ ನಿರಂಜನ್ ಪೋಳ್ಯ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಡಾ. ಕೆ. ಪಿ. ರಮೇಶ್‌ರವರಿಂದ ಮಲೆನಾಡು ಗಿಡ್ದ ತಳಿಯ ವೈವಿಧ್ಯದ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ. ಮಲೆನಾಡು ಗಿಡ್ಡ ಹಸುವಿನ ಉತ್ಪನ್ನಗಳ ಔಷಧೀಯ ಗುಣಗಳ ಬಗ್ಗೆ ಪಾರಂಪರಿಕ ವೈದ್ಯರಾದ ಈಶ್ವರ್ ನಂಜನಗೂಡುರವರು ಮಾಹಿತಿ ನೀಡಲಿದ್ದಾರೆ. ಗವ್ಯೋತ್ಪನ್ನ ತಯಾರಿಕೆ ಕುರಿತು ಅರಿವು ಕಾರ್ಯಕ್ರಮ ನಡೆಯಲಿದೆ. ಪಾರಂಪರಿಕ ಚಿಕಿತ್ಸಕ ಈಶ್ವರ್ ರವರು ಉಚಿತ ವಿತರಣೆ ಮಾಡಲಿದ್ದಾರೆ.