ಐಎನ್ಐ – ಸಿಇಟಿ ಪರೀಕ್ಷೆಯಲ್ಲಿ ಸುಳ್ಯದ ಸುದೀಕ್ಷಾ ಕೆ.ಎಸ್.ಇವರಿಗೆ 310 ನೇ ರ್ಯಾಂಕ್

0

ಆಲ್ ಇಂಡಿಯಾ ಇನ್ಸ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಅವರು ಮೇ.19ರಂದು ಮೆಡಿಕಲ್ ಪೋಸ್ಟ್ ಗ್ರಾಜುವೆಷನ್ ಎಂಟ್ರಾನ್ಸ್ ಗಾಗಿ ನಡೆಸಿದ Institute of National Importance Combined Entrance Test (INI-CET) ಪರೀಕ್ಷೆಯಲ್ಲಿ ಸುಳ್ಯದ ಸುದೀಕ್ಷಾ ಕೆ.ಎಸ್ ಇವರು ಆಲ್ ಇಂಡಿಯ ಲೆವೆಲ್ಲಿನಲ್ಲಿ ಶೇ. 99.63 ಪಡೆದು 310 ನೇ ರ್ಯಾಂಕ್ ತೆಗೆದಿರುತ್ತಾರೆ. ಇವರು ಕೊಡಗು ಇನ್ಸ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸ್ ಮಡಿಕೇರಿ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮಾಡಿದ್ದಾರೆ. ಸುಳ್ಯ ಬೊಳುಬೈಲಿನ ಕೆ.ಪಿ. ಶಿವ ಪ್ರಸಾದ್ ಮತ್ತು ಶ್ರೀಮತಿ ಸುಜಾತ ಕೆ.ಎಸ್. ದಂಪತಿಗಳ ಪುತ್ರಿ ಹಾಗೂ ಬೊಳುಬೈಲಿನ ದಿ. ಕಡಪಳ ಪುಟ್ಟಣ್ಣ ಗೌಡ ಮತ್ತು ದಿ.ಪುಟ್ಟಕ್ಕ ಕೆ ಪಿ ಅವರ ಮೊಮ್ಮಗಳು. ಕೆ.ವಿ.ಜಿ. ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ವಿದ್ಯಾಭ್ಯಾಸ ಮುಗಿಸಿ ಮೂಡಬಿದ್ರೆಯ ಎಕ್ಸೆಲೆಂಟ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದಿರುತ್ತಾರೆ.