ಶಾಲಾರಂಭ ಎರಡು ದಿನ ಮುಂದಕ್ಕೆ : ಶಿಕ್ಷಣ ಇಲಾಖೆ ಸೂಚನೆ

0

ಮೇ.29 ರಿಂದ ಶಿಕ್ಷಕರು – ಮೇ.31 ರಿಂದ ವಿದ್ಯಾರ್ಥಿಗಳು ಶಾಲೆಗೆ ಬರುವಂತೆ ಆದೇಶ

ಹೊಸ ಶೈಕ್ಷಣಿಕ ವರ್ಷದ ಶಾಲಾರಂಭ ಮೇ.29 ರಿಂದ ಎಂಬ ಸಾರ್ವಜನಿಕ ಶಿಕ್ಷಣ ಇಲಾಖೆಯ ಈ ಹಿಂದಿನ ಆದೇಶದಲ್ಲಿ ಸ್ವಲ್ಪ ಬದಲಾವಣೆಯಾಗಿದ್ದು, ವಿದ್ಯಾರ್ಥಿಗಳು ಮತ್ತೆರಡು ದಿನ ರಜೆ ಅವಧಿ ಪಡೆಯಲಿದ್ದಾರೆ.

ಮೇ.29 ರಿಂದಲೇ ಶಿಕ್ಷಕರು ಶಾಲೆಗೆ ಹಾಜರಾಗಲು ಸೂಚಿಸಲಾಗಿದೆ. ಮೇ.31ರಂದು ಮಕ್ಕಳು ಶಾಲೆಗೆ ಬರುವಂತೆ ಸೂಚಿಸಲಾಗಿದೆ.

ಮೇ.29ರಂದು ಶಾಲೆಗೆ ಬರುವ ಶಿಕ್ಷಕರು ಸಿದ್ಧತಾ ಕಾರ್ಯವನ್ನು ನಡೆಸಲಿದ್ದಾರೆ. ಮಕ್ಕಳು ಮೇ.31ರಂದು ಶಾಲೆಗೆ ಬಂದರಾಯಿತು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆ ಮೂಲಕ ಮೇ.29ರಂದು ಶಾಲೆಗೆ ತೆರಳಲು ಸಿದ್ಧರಾಗಿದ್ದ ಮಕ್ಕಳಿಗೆ ಎರಡು ದಿನ ಹೆಚ್ಚಿಗೆ ರಜೆ ದೊರೆತಂತಾಗಿದೆ.