ಸುಬ್ರಹ್ಮಣ್ಯ ಠಾಣೆಯಲ್ಲಿ ಶಾಂತಿ ಸಭೆ

0

ಮುಸ್ಲೀಂ ಧರ್ಮದ ಹಬ್ಬ ಬಕ್ರೀದ್ ಆಚರಣೆಯ ಪ್ರಯುಕ್ತ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಉಪನಿರೀಕ್ಷಕ ಕಾರ್ತಿಕ್ ನೇತೃತ್ವದಲ್ಲಿ ಶಾಂತಿ ಸಭೆ ಜೂ.15 ರಂದು ನಡೆಯಿತು.

ಠಾಣಾ ವ್ಯಾಪ್ತಿಯ ಮುಸ್ಲಿಂ ಹಾಗೂ ಹಿಂದೂ ಪ್ರಮುಖರ ಉಪಸ್ಥಿತಿಯಲ್ಲಿ ಶಾಂತಿ ಸಭೆ ನಡೆಯಿತು. ಕೋಮುಸೌಹಾರ್ದತೆಗೆ ಧಕ್ಕೆ ತರುವಂತಹ ಯಾವುದೇ ಘಟನೆಗಳಿಗೆ ಆಸ್ಪದ ನೀಡದೇ ಶಾಂತಿಯುತವಾಗಿ ಆಚರಿಸುವಂತೆ ಸರ್ವ ಧರ್ಮಗಳ ಮುಖಂಡರುಗಳಿಗೆ ಮನವಿ ಮಾಡಲಾಯಿತು. ಗುತ್ತಿಗಾರು, ಎಲಿಮಲೆ, ಕೊಲ್ಲಮೊಗ್ರು ಗ್ರಾಮಗಳ ಮುಸ್ಲಿಂ ಧರ್ಮ ಗುರುಗಳು, ಹಿಂದೂ ಧರ್ಮದ ಪ್ರಮುಖರಾದ ಹರೀಶ ಇಂಜಾಡಿ, ಶಿವರಾಮ ರೈ, ಮೋಹನದಾಸ ರೈ,ಪವನ್ ಎಂ.ಡಿ, ಚಂದ್ರಹಾಸ ಶಿವಾಲ, ಗಿರೀಶ ಆಚಾರ್ಯ ಪೈಲಾಜೆ ಮೊದಲಾದವರು ಉಪಸ್ಥಿತರಿದ್ದರು.