ಮೊಗರ್ಪಣೆ: ಮುಹಿಯ್ಯದ್ದೀನ್ ಜುಮಾ ಮಸ್ಜಿದ್ ನಲ್ಲಿ ಭಕ್ತಿಪೂರ್ವ ಬಕ್ರೀದ್ ಹಬ್ಬಾಚರಣೆ

0

ಪೂರ್ವಿಕರು ತೋರಿಸಿದ ಸತ್ಯದ ದಾರಿಯನ್ನು ಅನುಸರಿಸಿ, ಸೌಹಾರ್ದ ಬಾಳ್ವೆ ನಡೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ಹಾಫಿಲ್ ಸೌಕತ್ ಅಲಿ ಸಖಾಫಿ

ಮುಸಲ್ಮಾನ ಬಾಂಧವರ ತ್ಯಾಗ ಮತ್ತು ಬಲಿದಾನದ ಸಾಂಕೇತವಾದ ಬಕ್ರೀದ್ ಹಬ್ಬಾಚರಣೆ ಇಂದು ಮೊಗರ್ಪಣೆ ಮುಹಿಯ್ಯದ್ದೀನ್ ಜುಮಾ ಮಸೀದಿಯಲ್ಲಿ ಭಕ್ತಿ ಪೂರ್ವವಾಗಿ ಆಚರಿಸಲಾಯಿತು.


ಈ ಸಂದರ್ಭದಲ್ಲಿ ಈದ್ ಸಂದೇಶವನ್ನು ನೀಡಿದ ಸ್ಥಳೀಯ ಮಸೀದಿ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಕಾಫಿ ಯವರು ‘ ಬಕ್ರೀದ್ ಹಬ್ಬ ಆಚರಣೆ ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸಬೇಕಾಗಿದೆ. ನಮ್ಮ ಪೂರ್ವಿಕರು ತೋರಿಸಿದ ಸತ್ಯದ ಹಾದಿಯನ್ನು ಅನುಸರಿಸಿ ಸಮಾಜದಲ್ಲಿ ಸೌಹಾರ್ದತೆಯುತವಾದ ಬಾಳ್ವೆಯನ್ನು ನಡೆಸಬೇಕಾಗಿದೆ ಇದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದು ಸರ್ವರಿಗೂ ಈದ್ ಶುಭಾಶಯಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಎಚ್ ಐ ಜೆ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್, ಸಮಿತಿಯ ಪದಾಧಿಕಾರಿಗಳು ಸದಸ್ಯರು, ಹಾಗೂ ಜಮಾಅತ್ತಿನ ನೂರಾರು ಸದಸ್ಯರುಗಳು ಭಾಗವಹಿಸಿದ್ದರು.
ಬಳಿಕ ಕಬರ್ ಸ್ಥಾನಕ್ಕೆ ತೆರಳಿ ಅಗಲಿದ ಕುಟುಂಬದ ಸದಸ್ಯರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಮೊಗರ್ಪಣೆ ದರ್ಗಾದಲ್ಲಿ ಸಾಮೂಹಿಕ ಈದ್ ಪ್ರಾರ್ಥನೆ ನಡೆಯಿತು. ಭಾಗವಹಿಸಿದ್ದ ಸರ್ವರೂ ಪರಸ್ಪರ ಈದ್ ಶುಭಾಶಯಗಳನ್ನು ಮಾಡಿಕೊಂಡರು.