ಹಳೆಗೇಟು: ಕಾರು ಮತ್ತು ಬೈಕ್ ನಡುವೆ ಡಿಕ್ಕಿ, ಸವಾರರು ಅಪಾಯದಿಂದ ಪಾರು

0

ಸುಳ್ಯ ಹಳೆಗೇಟು ಸಮೀಪ ಪೆಟ್ರೋಲ್ ಬಂಕ್ ಬಳಿ ಇನೋವಾ ಕಾರು ಮತ್ತು ಬೈಕಿನ ನಡುವೆ ಅಪಘಾತ ಸಂಭವಿಸಿದ ಘಟನೆ ಜೂ 17ರಂದು ಸಂಜೆ ನಡೆದಿದೆ.

ಪೈಚಾರು ಕಡೆಯಿಂದ ಸುಳ್ಳಕ್ಕೆ ಬರುತ್ತಿದ್ದ ಬೈಕು ಮತ್ತು ಸುಳ್ಯದಿಂದ ಪುತ್ತೂರು ಕಡೆ ಹೋಗುತ್ತಿದ್ದ ಇನೋವಾ ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದು ಡಿಕ್ಕಿಯ ರಭಸಕ್ಕೆ ದ್ವಿಚಕ್ರವಾಹನದಲ್ಲಿದ್ದ ಇಬ್ಬರು ಸವಾರರು ರಸ್ತೆಗೆ ಬಿದ್ದಿದ್ದಾರೆ. ಘಟನೆಯಿಂದ ವಾಹನ ಜಖಂಗೊಂಡಿದ್ದು ಸವಾರರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಘಟನೆಯಿಂದ ಕೆಲ ಸಮಯ ಟ್ರಾಫಿಕ್ ಸಮಸ್ಯೆ ಉಂಟಾಯಿತು