ಕಾಂತಮಂಗಲ ಕೊಲೆ ಆರೋಪಿ ಪತ್ತೆ

0

ಎಡಮಂಗಲದ ವ್ಯಕ್ತಿಯ ಬಂಧನ?

ಅಜ್ಜಾವರ ಗ್ರಾಮದ ಕಾಂತಮಂಗಲದಲ್ಲಿ ಕೊಲೆಗೀಡಾದ ವ್ಯಕ್ತಿಯ ಕೊಲೆ ಆರೋಪಿಯನ್ನು ಪೋಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ.

ಎಡಮಂಗಲದ ವ್ಯಕ್ತಿಯೊಬ್ಬನನ್ನು ಸುಳ್ಯ ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿರುವುದಾಗಿ ಹೇಳಲಾಗಿದೆ.

ಸುಳ್ಯ‌ಬಸ್ ನಿಲ್ದಾಣದಲ್ಲೇ ಆವರಿಬ್ಬರಿಗೆ ಪರಿಚಯವಾಗಿದ್ದು, ಬಳಿಕ ಅವರಿಬ್ಬರು ಕಾಂತಮಂಗಲಕ್ಕೆ ಹೋಗಿ ಅಲ್ಲಿ ಶಾಲಾ‌ ಜಗಲಿಯಲ್ಲಿ ಕುಳಿತು ಮದ್ಯ ಸೇವಿಸಿದ್ದಾರೆ. ಅವರೊಳಗೆ ಚಕಮಕಿ ನಡೆದು, ಅದು ಕೊಲೆ ತನಕ ಮುಟ್ಟಿತೆಂದು ತಿಳಿದುಬಂದಿದೆ.

ಸಿಸಿಕ್ಯಾಮರಾ ಬಸ್ ನಿಲ್ದಾಣ ಸಮೀಪದ ಬಾರೊಂದಕ್ಕೆ ಇಬ್ಬರು ಜತೆಯಾಗಿ ಹೋಗಿರುವುದು ಗೊತ್ತಾಯಿತು. ಈ ಆಧಾರದಲ್ಲಿ ಪೋಲೀಸರು ತನಿಖೆ ನಡೆಸಿದಾಗ ಮಹತ್ವದ ಮಾಹಿತಿ ದೊರೆತು, ಆರೋಪಿಯನ್ನು ವಶಕ್ಕೆ ಪಡೆಯಲಾಯಿತೆಂದು ತಿಳಿದುಬಂದಿದೆ.