ಅನ್ಸಾರಿಯಾ ಎಜುಕೇಶನ್ ಸೆಂಟರ್ ನಲ್ಲಿ ಸ್ವಾತಂತ್ರ್ಯೋತ್ಸವ ಗ್ರಾಂಡ್ ಅಸೆಂಬ್ಲಿ

0

ಸುಳ್ಯ : ಭಾರತದ 76ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಮತ-ಲೌಕಿಕ ವಿದ್ಯಾಸಂಸ್ಥೆ ಅನ್ಸಾರಿಯಾದಲ್ಲಿ ವಿಧ್ಯಾರ್ಥಿಗಳಿಂದ ಗ್ರಾಂಡ್ ಅಸೆಂಬ್ಲಿ ವಿಜೃಂಭಣೆಯಿಂದ ನಡೆಯಿತು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕರವರು ಧ್ವಜಾರೋಹಣಗೈದರು. ಉಪಾಧ್ಯಕ್ಷ ಅಬೂಬಕರ್ ಎಸ್. ಪಿ ರವರ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾಲೂಕು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಕಮಾಲ್ ಕಡಬ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯದರ್ಶಿ ಶರೀಫ್ ಜಟ್ಟಿಪ್ಪಳ್ಳ, ನಿರ್ದೇಶಕರುಗಳಾದ ಅಬ್ದುಲ್ ಹಮೀದ್ ಬೀಜಕೊಚ್ಚಿ ,ಎಸ್ ಎಮ್ ಹಮೀದ್ ಹಾಜಿ,ಸಿದ್ದೀಕ್ ಕಟ್ಟೆಕ್ಕಾರ್ , ಇಬ್ರಾಹಿಂ ಕೆ. ಬಿ, ಅಧ್ಯಾಪಕರುಗಳಾದ ಉಮರ್ ಮುಸ್ಲಿಯಾರ್, ಅಬೂಬಕರ್ ಹಿಮಮಿ ಸಖಾಫಿ, ಉವೈಸ್ ಬೀಟಿಗೆ, ಸಯ್ಯಿದ್ ಹುಸೈನ್ ಸಅದಿ ತಂಙಳ್, ಹಂಝತುಲ್ ಕರ್ರಾರ್ ಮುಈನಿ ಸಖಾಫಿ, ನೌಶಾದ್ ಮದನಿ, ಹಾಫಿಳ್ ಇರ್ಫಾನ್ ಹಾಶಿಮಿ, ಸ್ವಾದಿಕ್ ಸಂಪ್ಯ, ಗಾಂಧಿನಗರ ಕೇಂದ್ರ ಮಸೀದಿ ನಿರ್ದೇಶಕರುಗಳಾದ ಅಬ್ದುಲ್ ಮಜೀದ್ ಕೆ. ಬಿ , ಗ್ರೀನ್ ವ್ಯೂವ್ ಆಂಗ್ಲ ಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯ ಅಬ್ದುಲ್ ರಹೀಮ್ ಎಂ. ಎಸ್. ಎಂ ಹಾಗೂ ಸಂಸ್ಥೆಯ ಹಿತೈಷಿಗಳು ಹಾಗೂ ವಿಧ್ಯಾರ್ಥಿಗಳು ಭಾಗವಹಿಸಿದ್ದರು. ವಿಧ್ಯಾರ್ಥಿಗಳಿಂದ ಗ್ರಾಂಡ್ ಅಸೆಂಬ್ಲಿ ಕಾರ್ಯಕ್ರಮಕ್ಕೆ ಮೆರುಗು ನೀಡಿತು.

ವಿದ್ಯಾರ್ಥಿಗಳಿಂದ ಭಾಷಣ , ದೇಶಭಕ್ತಿ ಗೀತೆ ಹಾಗೂ ವೈವಿಧ್ಯಮಯ ಕಾರ್ಯಕ್ರಮ ಮತ್ತು ಬಹುಮಾನ ವಿತರಣೆ ನಡೆಯಿತು.

ಸಂಸ್ಥೆಯ ಅಧ್ಯಾಪಕರಾದ ಅಬ್ದುಲ್ಲಾ ಹಿಮಮಿ ಸಖಾಫಿ ಸ್ವಾಗತಿಸಿ ವಿಧ್ಯಾರ್ಥಿ ನಾಯಕ ಅಫ್ವಾನ್ ವಂದಿಸಿದರು.