ಜ್ಞಾನದೀಪ ವಿದ್ಯಾ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಕ್ಷೇತ್ರೀಯ ಮಟ್ಟಕ್ಕೆ

0


ಶಕ್ತಿ ವಿದ್ಯಾ ಸಂಸ್ಥೆಗಳು, ಮಂಗಳೂರು ಇಲ್ಲಿಆಗಸ್ಟ್ 12 ರಂದು ನಡೆದ ವಿದ್ಯಾಭಾರತಿ ಕರ್ನಾಟಕ ಇದರ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ 14 ರ ವಯೋಮಿತಿಯ ಬಾಲಕಿಯರ ವಿಭಾಗದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಜಯಗಳಿಸಿದ ಜ್ಞಾನದೀಪ ವಿದ್ಯಾ ಸಂಸ್ಥೆ ಎಲಿಮಲೆ ಶಾಲೆಯಿಂದ ಆಯ್ಕೆಗೊಂಡ ಎಂಟನೇ ತರಗತಿಯ ವಿದ್ಯಾರ್ಥಿನಿಯರಾದ ಕುಮಾರಿ ತೃಶಾ ಹಾಗೂ ಲಕ್ಷ್ಯ ದಕ್ಷಿಣ ಮಧ್ಯ ಕ್ಷೇತ್ರ ವಿಭಾಗದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

ದಕ್ಷಿಣ ಮಧ್ಯ ಕ್ಷೇತ್ರ ಮಟ್ಟದ ಕಬಡ್ಡಿ ಪಂದ್ಯಾಟವು ಸೆಪ್ಟೆಂಬರ್ ಒಂದರಿಂದ ಮೂರರವರೆಗೆ ತೆಲಂಗಾಣ ರಾಜ್ಯದ ಹೈದರಾಬಾದ್‌ನಲ್ಲಿ ನಡೆಯಲಿದೆ. ಹೈದರಾಬಾದ್‌ನಲ್ಲಿ ನಡೆಯಲಿರುವ ಕಬಡ್ಡಿ ಪಂದ್ಯಾಟದಲ್ಲಿ ಈ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.