ಅಜ್ಜಾವರ ಗ್ರಾಮದ ಪಡ್ಡಂಬೈಲಿನಲ್ಲಿ ಚಿರತೆ ಸಾವು ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಗೆ ಮಂಗಳೂರಿನ 6 ನೇ ಹೆಚ್ಚುವರಿ ನ್ಯಾಯಾಲಯದಿಂದ ಜಾಮೀನು ದೊರೆತಿರುವುದಾಗಿ ತಿಳಿದುಬಂದಿದೆ.















ಪಡ್ಡಂಬೈಲಿನಲ್ಲಿ ಆ.29 ರಂದು ಉರುಳಿಗೆ ಚಿರತೆಯೊಂದು ಬಿದ್ದು ಮೃತಪಟ್ಟಿತ್ತು. ಉರುಳಿಟ್ಟು ಚಿರತೆ ಸಾವಿಗೆ ಕಾರಣರಾದರೆಂಬ ಆರೋಪದಲ್ಲಿ ಜಯರಾಮ ಹಾಗೂ ಪೃಥ್ವಿ ಎಂಬಿಬ್ಬರ ವಿರುದ್ದ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಇಬ್ಬರನ್ನೂ ಬಂಧಿಸಲಾಗಿತ್ತು. ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇದೀಗ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ದೊರೆತಿರುವುದಾಗಿ ತಿಳಿದುಬಂದಿದೆ.
ಆರೋಪಿಗಳ ಪರವಾಗಿ ಸುಳ್ಯದ ನ್ಯಾಯವಾದಿಗಳಾದ ನಾರಾಯಣ ಕೆ, ಚಂದ್ರಶೇಖರ ಸೋಣಂಗೇರಿ, ವಿಪುಲ್, ಅನಿತಾ ವಾದಿಸಿದ್ದಾರೆ.










