ಅಕ್ಟೋಬರ್‌ನಲ್ಲಿ ಸುಳ್ಯದಲ್ಲಿ ಮಹಿಳಾ ಸಮಾವೇಶ
ಸುಳ್ಯ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ವತಿಯಿಂದ ಮಹಿಳಾ ಮೀಸಲಾತಿ ಬಿಲ್ ಪಾಸ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದರಲ್ಲದೆ, ಅಕ್ಟೋಬರ್ ನಲ್ಲಿ ಸುಳ್ಯದಲ್ಲಿ ಮಹಿಳಾ ಸಮಾವೇಶ ನಡೆಸಲು ನಿರ್ಧರಿಸಿರುವುದಾಗಿ ಸುಳ್ಯ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಪದಾಧಿಕಾರಿಗಳು ಹೇಳಿದರು.
ಸೆ.೨೧ ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ನಿವೇದಿತಾ ಮಹಿಳಾ ಜಾಗೃತಿ ಟ್ರಸ್ಟ್ ಅಧ್ಯಕ್ಷೆ ಇಂದಿರಾ ರಾಜಶೇಖರ ರೈಯವರು ಮಾತನಾಡಿ , “ದೇಶಾದ್ಯಂತ ಹಲವಾರು ವರ್ಷಗಳ ಕನಸಾಗಿದ್ದ ಮಹಿಳಾ ಮೀಸಲಾತಿ ಬಿಲ್ ನ್ನು ಪಾಸ್ ಮಾಡಿ ಇಡೀ ದೇಶದ ಮಹಿಳೆಯರಿಗೆ ಅವಕಾಶ ನೀಡಿರುವ ಭಾರತದ ಪ್ರಧಾನಿ ನರೇಂದ್ರ ಮೊದಿಯವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಮುಂದಿನ ಅಕ್ಟೋಬರ್ ತಿಂಗಳಲ್ಲಿ ಸುಳ್ಯದಲ್ಲಿ ಮಹಿಳಾ ಸಮಾವೇಶ ಮಾಡಿ ಮತ್ತೊಮ್ಮೆ ಅಭಿನಂದನೆ ಸಲ್ಲಿಸಿಸುವ ಕಾರ್ಯಕ್ರಮ ಮಾಡಲಿದ್ದೇವೆ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗುಣವತಿ ಕೊಲಂತ್ತಡ್ಕ, ಕೋಶಾಧಿಕಾರಿ ಜಯಂತಿ ಜನಾರ್ದನ, ಸಹ ಕೋಶಾಧಿಕಾರಿ ಶಾರದಾ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪುಷ್ಪಾ ಮೇದಪ್ಪ, ನಿರ್ದೇಶಕರಾದ ದಿವ್ಯ ಮಡಪ್ಪಾಡಿ, ಸವಿತಾ ಕಾಯರ, ಲೋಲಾಕ್ಷಿ, ವೀಣಾ ಮೋಂಟಡ್ಕ ಉಪಸ್ಥಿತರಿದ್ದರು.