ಬೆಳ್ಳಾರೆ : ತಾಲೂಕಿನ ನವಜೀವನ ಸಮಿತಿ ಸದಸ್ಯರ ಅಭಿನಂದನಾ ಕಾರ್ಯಕ್ರಮ ಮತ್ತು ಪ್ರೇರಣಾ ಕಾರ್ಯಕ್ರಮ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸುಳ್ಯ ತಾಲೂಕು, ಅಜಿಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೆಳ್ಳಾರೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ತಾಲೂಕು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸುಳ್ಯ ತಾಲೂಕು, ಇದರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ನವಜೀವನ ಸಮಿತಿ ಸದಸ್ಯರ ಅಭಿನಂದನಾ ಕಾರ್ಯಕ್ರಮ ಮತ್ತು ಪ್ರೇರಣಾ ಕಾರ್ಯಕ್ರಮವು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಲೋಕನಾಥ ಅಮೆಚೂರುರವರ ಅಧ್ಯಕ್ಷತೆಯಲ್ಲಿ ಬೆಳ್ಳಾರೆಯ ಅಜಿಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಅ.22 ರಂದು ನಡೆಯಿತು.

ಈ ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ದೀಪವನ್ನು ಪ್ರಜ್ವಲಿಸುವ ಮುಖೇನ ಚಾಲನೆಯನ್ನು ನೀಡಿ, ಕಾರ್ಯಕ್ರಮಕ್ಕೆ ಶುಭಕೋರಿದರು.


ಈ ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ಮಾತನಾಡುತ್ತಾ, ಮದ್ಯಾವರ್ಜನಾ ಶಿಬಿರಕ್ಕೆ ಸೇರಿ ಹಲವಾರು ಸದಸ್ಯರು ಉತ್ತಮ ಜೀವನ ಮಾಡುತ್ತಿದ್ದಾರೆ, ಕೆಲವರು ಕೆಟ್ಟ ಜನರ ಸಹವಾಸಕ್ಕೆ ಒಳಗಾಗಿ ದುಶ್ಚಾಟಕ್ಕೆ ಬಲಿಯಾಗಿರುತ್ತಾರೆ. ಅದನ್ನು ಸರಿಪಡಿಸಿಕೊಂಡು ಹೋಗಲು ಇಂತಹ ಪ್ರೇರಣಾ ಕಾರ್ಯಕ್ರಮ ಅತ್ಯಾವಕಾಶವಾಗಿದೆ. ನಾನು ನನಗಾಗಿ ದುಶ್ಚಟದಿಂದ ದೂರ ಆಗುವುದು ಮಾತ್ರವಲ್ಲದೆ ನಮ್ಮ ಕುಟುಂಬಕ್ಕೆ ಮಾದರಿಯಾಗಿರಬೇಕು ಎಂದು ಮಾಹಿತಿ ಮಾರ್ಗದರ್ಶನವನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ಸವಣೂರಿನ ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸೀತಾರಾಮ ಕೇವಳರವರು ಪ್ರೇರಣೆಯ ಮಾತನ್ನು ಮಾತನಾಡುತ್ತ, ಈ ಕಾರ್ಯಕ್ರಮವು ಒಂದು ಸುಂದರವಾದ ಕಾರ್ಯಕ್ರಮವಾಗಿದ್ದು, ರಾಷ್ಟ್ರಪಿತ ಗಾಂಧೀಜಿಯವರ ಹುಟ್ಟುಹಬ್ಬವನ್ನು ನೆನಪು ಮಾಡುವುದರೊಂದಿಗೆ ನವಜೀವನ ಸದಸ್ಯರಿಗೆ ಹೊಸ ಬದುಕು ನೀಡುವ ಕಾರ್ಯಕ್ರಮವಾಗಿದೆ. ಪೂಜ್ಯರು ಗ್ರಾಮ ಮಟ್ಟದಲ್ಲಿ ಮದ್ಯಾವರ್ಜನಾ ಶಿಬಿರಗಳನ್ನು ಮಾಡಿ ಎಷ್ಟೋ ಜನರ ಕುಟುಂಬದ ಬಾಳಿಗೆ ಬೆಳಕಾಗಿದ್ದಾರೆ. ಇದೀಗ ಒಳ್ಳೆಯ ಜೀವನವನ್ನು ಮಾಡುತ್ತಿದ್ದೀರಿ, ಮುಂದೆಕ್ಕೆ ನೀವೆಲ್ಲಾ ಕೆಟ್ಟವರ ಸಹವಾಸವನ್ನು ಮಾಡದೆ, ಉತ್ತಮವಾದ ಜೀವನವನ್ನು ನಡೆಸಿ, ನಿಮ್ಮ ಮಕ್ಕಳಿಗೆ ಕೂಡ ಉತ್ತಮವಾದ ಶಿಕ್ಷಣ ಕೊಡಿಸಿ ಎಂದು ಪ್ರೇರಣೆಯ ಮಾಹಿತಿಯನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ಪಾನಮುಕ್ತ ಸದಸ್ಯರಿಂದ ಮತ್ತು ಅವರ ಕುಟುಂಬ ಸದಸ್ಯರಿಂದ ಅನಿಸಿಕೆಯನ್ನು ವ್ಯಕ್ತಪಡಿಸಲಾಯಯಿತು.
ಈ ಕಾರ್ಯಕ್ರಮದಲ್ಲಿ ಪಾನಮುಕ್ತರಾಗಿ 15 ವರ್ಷ ಪೂರೈಸಿದ ನವಜೀವನ ಸಮಿತಿಯ ಸದಸ್ಯರನ್ನು ಮತ್ತು ನವಜೀವನ ಸಮಿತಿಯ ಅಧ್ಯಕ್ಷರುಗಳನ್ನು ಅಭಿನಂದಿಸಲಾಯಿತು ಹಾಗೂ ನಡೆದಾಡಲು ಅಸಕ್ತರಾಗಿರುವ ಕೊಡಿಯಾಲದ ರಾಮಣ್ಣ ಗೌಡರವರಿಗೆ ವೀಲ್ ಚಯರ್ ನ್ನು, ನಿರ್ಗತಿಕರಾದ ಕಲ್ಪಡದ ಪೂವಕ್ಕರವರಿಗೆ ಮಾಶಾಸನವನ್ನು, ಪ್ರಗತಿ ರಕ್ಷಾ ಕವಚದಲ್ಲಿ ಪೆರುವಾಜೆ ಅಶ್ವಿನಿರವರಿಗೆ ಮರಣ ಸಾಂತ್ವನದ ಮಂಜೂರಾತಿ ಪತ್ರವನ್ನು ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಎನ್ ಎ ರಾಮಚಂದ್ರರವರು, ಬೆಳ್ಳಾರೆಯ ಅಜಿಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಪಣ್ಣೆಗುತ್ತುರವರು, ತಾಲೂಕು ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕರವರು, ಭಜನಾ ಪರಿಷತ್ ನ ನಿಕಟಪೂರ್ವ ರಾಜ್ಯಾಧ್ಯಕ್ಷರಾದ ಶ್ರೀ ಬಾಲಕೃಷ್ಣ ಪುತ್ಯರವರು, ಜನಜಾಗೃತಿ ವೇದಿಕೆಯ ಬೆಳ್ಳಾರೆ ವಲಯ ಅಧ್ಯಕ್ಷರಾದ ಅನಂದ ಗೌಡ ಪೆರಿಯಾಣರವರು, ಬೆಳ್ಳಾರೆ ವಲಯದ ಒಕ್ಕೂ ಅಧ್ಯಕ್ಷರಾದ ಶ್ರೀಮತಿ ವೇದಾ ಎಚ್ ಶೆಟ್ಟಿರವರು, ಸಮಾಜ ಸೇವಕರಾದ ಬೆಳ್ಳಾರೆಯ ಮಿಥುನ್ ಶೆಣೈರವರು ಉಪಸ್ಥಿತರಿದ್ದರು.


ಈ ಕಾರ್ಯಕ್ರಮದಲ್ಲಿ ತಾಲೂಕು ಜನಜಾಗೃತಿವೇದಿಕೆಯ ನಿಕಟಪೂರ್ವ ಅಧ್ಯಕ್ಷರುಗಳು, ವಲಯ ಜನಜಾಗೃತಿ ವೇದಿಕೆಗಳ ವಲಯ ಅಧ್ಯಕ್ಷರುಗಳು, ಒಕ್ಕೂಟದ ವಲಯ ಅಧ್ಯಕ್ಷರುಗಳು, ತಾಲೂಕು ಭಜನಾ ಪರಿಷತ್ ನ ಅಧ್ಯಕ್ಷರು ಮತ್ತು ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಜನಜಾಗೃತಿಯ ಪದಾಧಿಕಾರಿಗಳು, ನವಜೀವನ ಸಮಿತಿಯ ಅಧ್ಯಕ್ಷರುಗಳು, ನವಜೀವನ ಸಮಿತಿಯ ಎಲ್ಲಾ ಸದಸ್ಯರುಗಳು, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರುಗಳು, ಎಲ್ಲಾ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು, ನವಜೀವನ ಸಮಿತಿಯ ಪೋಷಕರುಗಳು, ಸೇವಾಪ್ರತಿನಿಧಿಗಳು ಭಾಗವಹಿಸಿದರು.
ಈ ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿಯವರಾದ ಮಾಧವ ಗೌಡರವರು ಪ್ರಾಸ್ತವಿಕದೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಸಂಪಾಜೆ ವಲಯದ ಮೇಲ್ವಿಚಾರಕರಾದ ಗಂಗಾಧರ ಕಾರ್ಯನಿರೂಪಿಸಿದರು. ಬೆಳ್ಳಾರೆ ವಲಯದ ಮೇಲ್ವಿಚಾರಕರಾದ ಶ್ರೀಮತಿ ವಿಶಾಲರವರು ಧನ್ಯವಾದ ಮಾಡಿದರು.