ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಕಡೆಯಿಂದ ನಾಮಪತ್ರ ಸಲ್ಲಿಕೆ
ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆ ನಡೆದಿದ್ದು, ಇಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಈಗಾಗಲೇ ನಾಮಪತ್ರ ಸಲ್ಲಿಕೆಯಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಕಡೆಯಿಂದ ನಾಮಪತ್ರ ಸಲ್ಲಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ವಿನಯ ಕುಮಾರ್ ಮುಳುಗಾಡು ನಾಮಪತ್ರ ಸಲ್ಲಿಸಿದ್ದಾರೆ. ಇವರನ್ನು ಕರುಣಾಕರ ಪಾರೆಪ್ಪಾಡಿ ಸೂಚಿಸಿ, ಆನಂದ ಶೆಟ್ಟಿಮಜಲು ಅನುಮೋದಿಸಿದರು.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮಿತ್ರದೇವ ನಾಮಪತ್ರ ಸಲ್ಲಿಸಿದ್ದಾರೆ. ಇವರನ್ನು ಪಿ.ಸಿ.ಜಯರಾಮ ಸೂಚಿಸಿ, ಪ್ರವೀಣ ಯತೀಂದ್ರನಾಥ ಅನುಮೋದಿಸಿದ್ದಾರೆ.
ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಜೆ.ಪಿ. ಬೆಂಬಲಿತ ಅಧ್ಯಕ್ಷರಾಗಿ ಸಚಿನ್ ಸಚಿನ್ ಬಳ್ಳಡ್ಕ ನಾಮಪತ್ರ ಸಲ್ಲಿಸಿದ್ದಾರೆ. ಇವರನ್ನು ಶಕುಂತಲಾ ಕೇವಳ ಸೂಚಿಸಿ, ಪ್ರದೀಪ್ ಪನಿಯಾಲ ಅನುಮೋದಿಸಿದರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸೋಮಶೇಖರ ಕೇವಳ ನಾಮಪತ್ರ ಸಲ್ಲಿಸಿದ್ದಾರೆ. ಇವರನ್ನು ಚಂದ್ರಶೇಖರ ಗುಡ್ಡೆ ಸೂಚಿಸಿ, ಮಿತ್ರದೇವ ಮಡಪ್ಪಾಡಿ ಅನುಮೋದಿಸಿದ್ದಾರೆ.
ಇನ್ನು ನಾಮಪತ್ರ ಪರಿಶೀಲನೆಯಾದ ಬಳಿಕ ಚುನಾವಣಾ ಫಲಿತಾಂಶ ನಡೆಯಲಿದೆ. ಮಧ್ಯಾಹ್ನದ ವೇಳೆ ಫಲಿತಾಂಶ ಘೋಷಣೆಯಾಗಲಿದೆ.
ಮಡಪ್ಪಾಡಿ ಸೊಸೈಟಿಗೆ ನಡೆದ ಚುನಾವಣೆಯಲ್ಲಿ ೭ ಸ್ಥಾನ ಬಿಜೆಪಿ ಅಭ್ಯರ್ಥಿಗಳು ಮತ್ತು ೪ ಸ್ಥಾನ ಕಾಂಗ್ರೆಸ್ ಅಭ್ಯರ್ಥಿಗಳು ವಿಜಯಿಯಾಗಿದ್ದರು.
ನಾಮಪತ್ರ ಅಂಗೀಕಾರಗೊಂಡು ಚುನಾವಣಾ ಪ್ರಕ್ರಿಯೆ ಆರಂಭಗೊಂಡಿದೆ.