ಶಿಕ್ಷಣ ಗುಣಮಟ್ಟ ಸುಧಾರಣೆ ಕಾರ್ಯಕ್ರಮ ಅಡಿಯಲ್ಲಿ ಶ್ರೀ ಆಲೂರು ವೆಂಕಟರಾವ್ ಭಾಷಾ ಕೌಶಲ್ಯ ಕೇಂದ್ರದ ಅನುಮೋದಿತ ಕ್ರಿಯಾಯೋಜನೆಯ ಕಾರ್ಯಕ್ರಮವಾದ ಜಿಲ್ಲಾ ಮಟ್ಟದ ಪಠ್ಯ ನಾಟಕೋತ್ಸವ ಸ್ಪರ್ಧೆಯು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕೊಡಿಯಾಲ್ ಬೈಲ್ ಮಂಗಳೂರು ಇಲ್ಲಿ ಜ. 18 ರಂದು ನಡೆದಿದ್ದು ಈ ಸ್ಪರ್ಧೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇದರ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಇಂಗ್ಲೀಷ್ ಪಠ್ಯ ವಿಷಯದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಸ್ಪರ್ಧೆಯಲ್ಲಿ ಆರನೇ ತರಗತಿಯ ಇಂಗ್ಲಿಷ್ ಪಠ್ಯಪುಸ್ತಕದ “ಸ್ಕಾಲರ್ಸ್ ಮದರ್ ಟಂಗ್” ಎಂಬ ನಾಟಕವನ್ನು ವಿದ್ಯಾರ್ಥಿನಿಯರಾದ ಮಹತಿ ರಾವ್ ಆಕಿರೆಕಾಡು, ನೂಹಾ ಫಾತಿಮ, ಪ್ರಿಯಾ ಎ, ಡಿ. ಶ್ರೀಜಾ, ಪ್ರಾರ್ಥನಾ ಎಸ್ .ಆರ್ . ಹಾಗೂ ವರ್ಷಾ ಎನ್ .ಡಿ. ಪ್ರಸ್ತುತಪಡಿಸಿದ್ದರು.
ಈ ನಾಟಕವನ್ನು ಶಿಕ್ಷಕಿ ಸುಜಯಶ್ರೀ ನಿರ್ದೇಶಿಸಿದ್ದು, ಶಿಕ್ಷಕಿ ಅರುಣಾಕ್ಷಿ ಕೆ.ಎಲ್ ಇವರು ತಂಡದ ವ್ಯವಸ್ಥಾಪಕರಾಗಿದ್ದರು.
ಇದೇ ಶಾಲೆಯ ವಿದ್ಯಾರ್ಥಿಗಳ ಮೂರು ತಂಡಗಳು ಇತ್ತೀಚೆಗೆ ಸುಳ್ಯದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ನಾಟಕೋತ್ಸವದಲ್ಲಿ ಇಂಗ್ಲಿಷ್ ನಾಟಕದಲ್ಲಿ ಪ್ರಥಮ, ಕನ್ನಡ ಮತ್ತು ಹಿಂದಿ ನಾಟಕಗಳಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಕೆಪಿಎಸ್ ಬೆಳ್ಳಾರೆ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಇತ್ತಿಚೆಗೆ ನಡೆದ ಶಾಲಾ ವಸಂತ ಸಂಭ್ರಮ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಇಂಗ್ಲಿಷ್ ನಾಟಕಗಳನ್ನು ಪ್ರದರ್ಶಿಸಿರುವುದನ್ನು ಕೂಡ ಇಲ್ಲಿ ಸ್ಮರಿಸಿಕೊಳ್ಳಬಹುದು.