ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಪರಿವಾರ ದೈವಗಳಾದ ಶ್ರೀ ರಕ್ತೇಶ್ವರಿ ದೈವದ ಪುನಃ ಪ್ರತಿಷ್ಠೆ ಮೂಲಸ್ಥಾನದಲ್ಲಿ ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜ.18 ರಂದು ಪೂರ್ವಾಹ್ನ ಜರುಗಿತು.
ಸಂಜೆ ಬಂಡಾರ ತೆಗೆದು ರಾತ್ರಿ ಶ್ರೀ ರಕ್ತೇಶ್ವರಿ ದೈವ ದೈವದ ನೇಮೋತ್ಸವ ಜರುಗಿತು. ಬಳಿಕ ಪ್ರಸಾದ ವಿತರಣೆ,ಅನ್ನ ಸಂತರ್ಪಣೆ ನಡೆಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸತ್ಯನಾರಾಯಣ ಭಟ್ ಕಾಯಂಬಾಡಿ , ಸಂತೋಷ್ ಕುಮಾರ್ ರೈ ಬಳ್ಪ, ಧರ್ಮಣ್ಣ ನಾಯ್ಕ ಗರಡಿ ,ಧರ್ಮಪಾಲ ಗೌಡ ಕಾಚಿಲ ಮರಕ್ಕಡ ,ಮಾಯಿಲಪ್ಪ ಗೌಡ ಪಟ್ಟೆ ಎಣ್ಮೂರು, ರಾಮಚಂದ್ರ ಭಟ್, ,ಶ್ರೀಮತಿ ಪವಿತ್ರ ಮಲ್ಲೆಟ್ಟಿ , ಶ್ರೀಮತಿ ಮಾಲಿನಿ ಕುದ್ವ, ಗೌರವ ಸಲಹೆಗಾರರಾದ ಮಹೇಶ್ ಕುಮಾರ್ ಕರಿಕ್ಕಳ, ಆನಂದ ಗೌಡ ಕಂಬಳ ,ಉದಯ ಕುಮಾರ್ ಬೆಟ್ಟ ,ಪರಮೇಶ್ವರ ಬಿಳಿಮಲೆ ,ಉಮೇಶ್ ಬಳ್ಪ, ಸೀಮೆಯ ಭಕ್ತಾದಿಗಳು ಉಪಸ್ಥಿತರಿದ್ದರು.