ಮೊರಂಗಲ್ಲು ನೂತನ ತರವಾಡು ಮನೆಯ ಗೃಹ ಪ್ರವೇಶ, ಪ್ರತಿಷ್ಠೆ ಹಾಗೂ ಶ್ರೀ ದೈವಗಳ ನೇಮೋತ್ಸವದ ಪೂರ್ವ ಸಿದ್ಧತಾ ಸಭೆ

0

ಮೊರಂಗಲ್ಲು ಮನೆತನದ ನೂತನ ತರವಾಡು ಮನೆಯ ನಿರ್ಮಾಣ ವಾಗಿದ್ದು ಇದರ ಗೃಹ ಪ್ರವೇಶ ಹಾಗೂ ಶ್ರೀ ವೆಂಕಟರಮಣ ದೇವರ ಹರಿಸೇವೆ ಮತ್ತು ಶ್ರೀ ಪಾಷಾಣಮೂರ್ತಿ ದೈವದ ಪ್ರತಿಷ್ಠಾ ಕಾರ್ಯವನ್ನು ಕುಂಟಾರು ಕ್ಷೇತ್ರದ ತಂತ್ರಿಯವರ ನೇತೃತ್ವದಲ್ಲಿ ಮುಂದಿನ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ನಡೆಸುವ ಸಲುವಾಗಿ ಪೂರ್ವ ಸಿದ್ಧತಾ ಸಭೆಯನ್ನು ಮೊರಂಗಲ್ಲು ಶ್ರೀ ಧೂಮಾವತಿ ಸಪರಿವಾರ ದೈವಸ್ಥಾನದ ವಠಾರದಲ್ಲಿ‌ ಫೆ.9 ರಂದು ನಡೆಸಲಾಯಿತು.

ಮೊರಂಗಲ್ಲು ಶ್ರೀ ಧೂಮಾವತಿ ದೈವಸ್ಥಾನದ ಅಧ್ಯಕ್ಷ ಗುರುಪ್ರಸಾದ್ ರೈ ಮೊರಂಗಲ್ಲು ಅಧ್ಯಕ್ಷತೆ ವಹಿಸಿದ್ದರು.

ಹಿರಿಯರಾದ ಮೊರಂಗಲ್ಲು ಶಿವರಾಮ ರೈ ಗುಂಡ್ಯ, ಆಲೆಟ್ಟಿ ಸೊಸೈಟಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ನಿವೃತ್ತ ಯೋಧ ರಾಧಾಕೃಷ್ಣ ರೈ ಆಲೆಟ್ಟಿ, ಹಿರಿಯರಾದ ರಾಮದಾಸ ರೈ ಮೊರಂಗಲ್ಲು, ವಿಶ್ವನಾಥ ರೈ ಮೊರಂಗಲ್ಲು, ನಾರಾಯಣ ರೈ ಆಲೆಟ್ಟಿ, ಪುರುಷೋತ್ತಮ ಕುಂಚಡ್ಕ, ಸದಾಶಿವ ಗೌಡ. ಕುತ್ಯಾಳ, ಕೇಶವ ಮೊರಂಗಲ್ಲು, ನಂಜುಂಡ ದೇವಸ್ಯ, ದೇವಯ್ಯ ಗೌಡ ಮೊರಂಗಲ್ಲು, ಗೋಪಾಲಕೃಷ್ಣ ಮೊರಂಗಲ್ಲು ರವರು ಉಪಸ್ಥಿತರಿದ್ದರು.


ಆಶಿಕ್ ರೈ ಮೊರಂಗಲ್ಲು ಸರ್ವರನ್ನೂ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮುಂದಿನ ಉತ್ಸವದ ಸಮಯದಲ್ಲಿ ಜವಬ್ದಾರಿ ಹಂಚಿಕೆಯ ಕುರಿತು ಬೈಲಿನವರನ್ನು ಸೇರಿಸಿಕೊಂಡು ಉಪ ಸಮಿತಿಯನ್ನು ರಚಿಸಲಾಯಿತು. ಧಾರ್ಮಿಕ ಹಾಗೂ ಸಭಾ ಕಾರ್ಯಕ್ರಮ ನಡೆಸುವ ಕುರಿತು ಚರ್ಚಿಸಲಾಯಿತು. ಆಮಂತ್ರಣ ಪತ್ರಿಕೆಯ ಮುದ್ರಣದ ಬಗ್ಗೆ ಮತ್ತು ಹಂಚಿಕೆಯ ಕುರಿತು ರೂಪುರೇಷೆಗಳನ್ನು ವಿಮರ್ಶಿಸಲಾಯಿತು. ಈ ಸಂದರ್ಭದಲ್ಲಿ ಮೊರಂಗಲ್ಲು ಕುಟುಂಬಸ್ಥರು ಹಾಗೂ ಮೊರಂಗಲ್ಲು
ಬೈಲಿನವರು ಸಭೆಯಲ್ಲಿ ಭಾಗವಹಿಸಿದರು.