ಮಂಗಳೂರು ವಿಶ್ವವಿದ್ಯಾನಿಲಯದ 2024 ನೇ ಸಾಲಿನ ಫಲಿತಾಂಶ ಪ್ರಕಟಗೊಂಡಿದ್ದು, ಉಡುಪಿಯ ತೆಂಕನಿಡಿಯೂರು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಎಂ.ಎ. ವ್ಯಾಸಂಗ ಮಾಡುತ್ತಿರುವ ಪಲ್ಲವಿ ಕೊಡಗು ನಾಲ್ಕನೇ ರ್ಯಾಂಕ್ ಪಡೆದುಕೊಂಡಿದ್ದಾರೆ.















ಬಾಲ್ಯದಿಂದಲೇ ವಿವಿಧ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಂಡ ಪಲ್ಲವಿ ನಾಟಕ,ಸಿನಿಮಾ,ಸಂಗೀತ ಯಕ್ಷಗಾನ ನೃತ್ಯ ಹೀಗೆ ವಿವಿಧ ಪ್ರಕಾರಗಳಲ್ಲಿ ನಿರಂತರ ಸಕ್ರಿಯಳಾಗಿದ್ದು, ಕವನ,ಕಥೆ ರಚನೆ ಮತ್ತು ಭಾಷಾಂತರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾಳೆ.
ಈಕೆ ರಂಗಕರ್ಮಿ ಬಾಸುಮ ಕೊಡಗು ಹಾಗೂ ಕಾವ್ಯವಾಣಿ ಕೊಡಗು ದಂಪತಿಗಳ ಪುತ್ರಿ.










