Home ಚಿತ್ರವರದಿ ಮಾ.18,19 : ಎಡಮಲೆ ಇರ್ವೆರ್ ಉಳ್ಳಾಕುಲು ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ

ಮಾ.18,19 : ಎಡಮಲೆ ಇರ್ವೆರ್ ಉಳ್ಳಾಕುಲು ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ

0

ಐವರ್ನಾಡು ಗ್ರಾಮದ ಪೇರಡ್ಕ – ಮಾಡ ಎಡಮಲೆ ಇರ್ವೆರ್ ಉಳ್ಳಾಕುಲು ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವವು ಮಾ.18 ಮತ್ತು ಮಾ.19 ರಂದು ನಡೆಯಲಿದೆ. ಮಾ.12.00 ರಂದು ಮುಹೂರ್ತದ ಗೊನೆ ಕಡಿಯಲಾಯಿತು. ಮಾ.18 ರಂದು ಬೆಳಿಗ್ಗೆ ಗಂಟೆ 10.00 ಕ್ಕೆ ಸ್ಥಳ ಶುದ್ಧಿ,ಆಯುಧ ಶುದ್ಧಿ,ತಂಬಿಲ ಸೇವೆ ನಡೆಯಲಿದೆ. ಸಂಜೆ ಗಂಟೆ 7.00 ಕ್ಕೆ ನೂಜಾಲು ಮಾಳ್ಯದಿಂದ ಭಂಡಾರ ತೆಗೆಯುವುದು.ರಾತ್ರಿ ಗಂಟೆ 11.30 ಕ್ಕೆ ಮುಡಿಯಾಗಿ ಪಲಯ ನೇಮ ನಡಾವಳಿ ನಡೆಯಲಿದೆ.
ಮಾ.19 ರಂದು ಬೆಳಿಗ್ಗೆ ಗಂಟೆ 9.00 ಕ್ಕೆ ಮೆಗ್ಯ ನೇಮ ನಡಾವಳಿ ಪ್ರಾರಂಭವಾಗಲಿದೆ. ಗಂಟೆ 9.30 ಕ್ಕೆ ಪ್ರಸಾದ ವಿತರಣೆ,ಬಟ್ಟಲು ಕಾಣಿಕೆ ನಡೆಯಲಿದೆ.
ಗಂಟೆ 11.30 ಕ್ಕೆ ನಾಯರ್ ದೈವದ ನೇಮ ಮಧ್ಯಾಹ್ನ ಗಂಟೆ 12.30 ಕ್ಕೆ ಪುರುಷ ದೈವದ ನೇಮ ಮತ್ತು ಉಪದೈವಗಳ ಕೋಲ ನಡೆಯಲಿದೆ.

ಗಂಟೆ 1.30 ಕ್ಕೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 5.00 ಕ್ಕೆ ದೈವದ ಭಂಡಾರವನ್ನು ನೂಜಾಲು ಮಾಳ್ಯಕ್ಕೆ ಸಾಗಿಸುವುದು.
ಮಾ.18 ರಂದು ಸಂಜೆ ಗಂಟೆ 7.00 ರಿಂದ 8.00 ರ ತನಕ ಗುರುದೇವ ಮಹಿಳಾ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.ರಾತ್ರಿ ಗಂಟೆ 8.00 ರಿಂದ 9.30 ರ ತನಕ ದೇವರಕಾನ ಸ.ಹಿ.ಪ್ರಾ.ಶಾಲಾ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ ನಡೆಯಲಿದೆ. ಬಳಿಕ ಕಲಾ ಮಂದಿರ್ ಡಾನ್ಸ್ ಕ್ರಿವ್ ಬೆಳ್ಳಾರೆ ಮತ್ತು ಪಂಜ ಶಾಖೆಯ ವಿದ್ಯಾರ್ಥಿಗಳಿಂದ “ನೃತ್ಯ ಸಂಭ್ರಮ” ನಡೆಯಲಿದೆ.

NO COMMENTS

error: Content is protected !!
Breaking