Home Uncategorized ಸಡಗರ ಭಕ್ತಿಯಿಂದ ನಡೆದ 44 ನೇ ವರ್ಷದ ದೊಡ್ಡಡ್ಕ ಶ್ರೀ ಆದಿ ಬ್ರಹ್ಮ ಮೊಗೇರ್ಕಳ ಹಾಗೂ...

ಸಡಗರ ಭಕ್ತಿಯಿಂದ ನಡೆದ 44 ನೇ ವರ್ಷದ ದೊಡ್ಡಡ್ಕ ಶ್ರೀ ಆದಿ ಬ್ರಹ್ಮ ಮೊಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ನೇಮೋತ್ಸವ

0

ಹರಕೆ ಕೋಲ ಸೇರಿದಂತೆ 16 ದೈವಗಳ ಕೋಲ – ಪ್ರಸಾದ ವಿತರಣೆ

ದ.ಕ ಸಂಪಾಜೆ ಗ್ರಾಮದ ಗೂನಡ್ಕ- ದೊಡ್ಡಡ್ಕ ರಾಜಾರಾಂಪುರದ ಶ್ರೀ ಆದಿ ಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ 44 ನೇ ವರ್ಷದ ಶ್ರೀ ಆದಿಬ್ರಹ್ಮ ಮೊಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ನೇಮೋತ್ಸವವು ಮಾರ್ಚ್ 15 ಮತ್ತು 16 ರಂದು ವಿಜೃಂಭಣೆಯಿಂದ ಜರುಗಿತು .

ಮಾರ್ಚ್ 15 ರಂದು ಬೆಳಿಗ್ಗೆ 7 ರಿಂದ ಸ್ಥಳ ಶುದ್ಧೀಕರಣ, 5 ತಂಡಗಳಿಂದ ಭಜಾನ ಕಾರ್ಯಕ್ರಮ, ಮಧ್ಯಾಹ್ನ 2 ಗಂಟೆಯಿಂದ ಮಂತ್ರವಾದಿ ಗುಳಿಗ ದೈವದ ನೇಮ, ರಾತ್ರಿ 8:30 ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ. ಬಳಿಕ ರಾತ್ರಿ 12 ರಿಂದ ಮಾಯೆದ ದೇವಿ ತನ್ನಿಮಾನಿ ಗರಡಿ ಇಳಿಯುವುದು, ಬಟ್ಟಲು ಕಾಣಿಕೆ, ಹೂವಿನ ಹಾರ ಅರ್ಪಿಸುವುದು , ರಾತ್ರಿ 2: 30 ರಿಂದ ಮೊಗೇರ ಪೂಜಾರಿಗಳ ದರ್ಶನ ಸವಾರಿ, ಬಳಿಕ ಹರಕೆ ಹಾಗೂ ಪ್ರಸಾದ ವಿತರಣೆ ನಡೆಯಿತು. ಮಾರ್ಚ್ 16 ಭಾನುವಾರದಂದು ಬೆಳಿಗ್ಗೆ 7 ಗಂಟೆಯಿಂದ ಹದಿನೈದು ಹರಕೆ ಕೋಲ ಮತ್ತು ಒಂದು ಕಾಲಾವಧಿ ಸೇರಿಸಿ ಒಟ್ಟು ಹದಿನಾರು ಸ್ವಾಮಿಕೊರಗಜ್ಜ ದೈವದ ನೇಮೋತ್ಸವ ಮತ್ತು ಪ್ರಸಾದ ವಿತರಣೆಯು ನಡೆಯಿತು.

ಊರ ಪರವೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಸ್ವಾಮಿ ಕೊರಗಜ್ಜನ ಪ್ರಸಾದವನ್ನು ಸ್ವೀಕರಿಸಿ ಕೃಪೆಗೆ ಪಾತ್ರಾರಾದರು .ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರು ಜಿ.ಕೆ ಚಂದ್ರ ಶೇಖರ , ಗೌರವಾಧ್ಯಕ್ಷ ಡಿ.ಕೆ ಬಾಬು, ಸುಂದರ ಪೂಜಾರಿ ದೊಡ್ಡಡ್ಕ , ಮತ್ತು ಅಧ್ಯಕ್ಷರು ಪದಾಧಿಕಾರಿಗಳು ಸರ್ವಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.

NO COMMENTS

error: Content is protected !!
Breaking