ನಂಗಾರಿನಲ್ಲಿ ನೀರಿನ ಟ್ಯಾಂಕ್ ಗೆ ಬಿದ್ದ ಕಾಡುಕೋಣ

0

ಕಾರ್ಯಾಚರಣೆ ನಡೆಸಿದ ವೀಡಿಯೋ ಇಲ್ಲಿದೆ….

ಜಾಲ್ಸೂರು ಗ್ರಾಮದ ನಂಗಾರಿನಲ್ಲಿ ಕಾಡುಕೋಣವೊಂದು ನೀರಿನ ಟ್ಯಾಂಕ್ ಗೆ ಬಿದ್ದು ಬಳಿಕ ಅರಣ್ಯ ಇಲಾಖೆ ಹಾಗೂ ಊರವರ ಸಹಕಾರದಲ್ಲಿ ಮೇಲೆ ಹತ್ತುವಂತೆ ಮಾಡಿರುವ ಘಟನೆ ವರದಿಯಾಗಿದೆ.

ನಂಗಾರು ಬಾಣಬೆಟ್ಟು ಪದ್ಮಯ್ಯ ಗೌಡರ ಮನೆಯ ಗುಡ್ಡದ ಜಾಗದಲ್ಲಿದ್ದ ಟ್ಯಾಂಕ್ ಗೆ ಕಾಡುಕೋಣವೊಂದು ಬಿದ್ದಿತ್ತು. ಅರಣ್ಯ ಇಲಾಖೆಗೆ ನಿನ್ನೆ ಸಂಜೆ ಈ ಕುರಿತು ಮಾಹಿತಿ ಲಭಿಸಿ, ಉಪ ವಲಯಾರಣ್ಯಾಧಿಕಾರಿಗಳಾದ ರಂಜಿತಾ ಪಿ, ಮದನ್, ಸೌಮ್ಯ, ಸಿಬ್ಬಂದಿಗಳಾದ ಸನತ್ ರೈ, ಸುಧೀರ್, ಬಿಪಿನ್, ದೇವಪ್ಪ, ಜಗದೀಶ್ ರವರು ಸ್ಥಳಲ್ಕೆ ತೆರಳಿದರು. ವಿಷಯ ತಿಳಿದು ಸ್ಥಳೀಯರು ಸೇರಿದ್ದರು.

ಬಳಿಕ ಹಿಟಾಚಿ ತಂದು, ಟ್ಯಾಂಕ್ ನ ಒಂದು ಭಾಗ ಒಡೆದು ಕಾಡುಕೋಣ ಮೇಲೆ ಹತ್ತುವಂತೆ ಮಾಡಲಾಯಿತೆಂದು ತಿಳಿದುಬಂದಿದೆ.