ಸುಳ್ಯ ಸರಕಾರಿ ಜೂ.ಕಾಲೇಜು ವಿದ್ಯಾರ್ಥಿ ಸೃಜನಾದಿತ್ಯಶೀಲ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್

0

ಸುಳ್ಯಕ್ಕೆ ಎರಡು ದ್ವಿತೀಯ ರ‍್ಯಾಂಕ್ ಗಳ ಬಂಪರ್

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸೃಜನಾದಿತ್ಯಶೀಲರಿಗೆ 625 ರಲ್ಲಿ 624 ಅಂಕ ಲಭಿಸಿದ್ದು ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ.

ಹಿಂದಿ ಹೊರತು ಪಡಿಸಿ ಇತರ ಎಲ್ಲಾ ವಿಷಯಗಳಲ್ಲಿ ಶೇ.100 ಅಂಕ ಗಳಿಸಿರುವ ಸೃಜನಾದಿತ್ಯಶೀಲ ಹಿಂದಿಯಲ್ಲಿ 100 ರಲ್ಲಿ 99 ಅಂಕ ಪಡೆದಿದ್ದಾರೆ.

ಇವರು ಸುಳ್ಯ ಸ.ಪ.ಪೂ.ಕಾಲೇಜಿನ ಪ್ರೌಢ ಶಾಲಾ ವಿಭಾಗದ ಅಧ್ಯಾಪಕರಾಗಿರುವ ಡಾ.ಸುಂದರ ಕೇನಾಜೆ ಹಾಗೂ ಎಲಿಮಲೆ ಸರಕಾರಿ ಪ್ರೌಢ
ಶಾಲೆಯ ಅಧ್ಯಾಪಕಿ ಶ್ರೀಮತಿ ರಾಜೇಶ್ವರಿಯವರ ಪುತ್ರ.