ಶ್ರೀಮತಿ ರುಕ್ಮಿಣಿ ತಂಟೆಪ್ಪಾಡಿಯವರಿಗೆ ಶ್ರದ್ಧಾಂಜಲಿ ಸಭೆ

0

ಮೇ. 18ರಂದು ನಿಧನರಾದ ತಂಟೆಪ್ಪಾಡಿ ಕೇಶವ ಗೌಡರ ಧರ್ಮಪತ್ನಿ ಶ್ರೀಮತಿ ರುಕ್ಮಿಣಿ ತಂಟೆಪ್ಪಾಡಿಯವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಮೇ. 29ರಂದು ಮೃತರ ಸ್ವಗೃಹದಲ್ಲಿ ನಡೆದ ವೈಕುಂಠ ಸಮಾರಾಧನೆಯ ಸಂದರ್ಭದಲ್ಲಿ ನಡೆಯಿತು.

ನಿವೃತ್ತ ಮುಖ್ಯೋಪಾಧ್ಯಾಯರಾದ ಮೇದಪ್ಪ ಗೌಡ ತಂಟೆಪ್ಪಾಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.

ನಿವೃತ್ತ ಪ್ರಾಂಶುಪಾಲರಾದ ಡಾ. ನಾರಾಯಣ ಶೇಡಿಕಜೆ ಮೃತರಿಗೆ ನುಡಿನಮನ ಸಲ್ಲಿಸಿದರು. ಮೃತರ ಪತಿಕೇಶವ ಗೌಡ ತಂಟೆಪ್ಪಾಡಿ, ಪುತ್ರರಾದ ಮೋಹನ್ ತಂಟೆಪ್ಪಾಡಿ, ಅನಂತಕೃಷ್ಣ ತಂಟೆಪ್ಪಾಡಿ, ಸೊಸೆಯಂದಿರಾದಶ್ರೀಮತಿ ಪೂಜ್ಯರಾಣಿ ಮೋಹನ್, ಶ್ರೀಮತಿ ಕೀರ್ತಿ ಅನಂತಕೃಷ್ಣ, ಪುತ್ರಿಯರಾದಶ್ರೀಮತಿ ಜ್ಯೋತಿ ಮಹೇಶ್ ಕೇನಾಜೆ, ಶ್ರೀಮತಿ ಚಿತ್ರಾ ಗಿರೀಶ್ ಆರ್ನೂಜಿ, ಮೃತರ ಸಹೋದರರು ಸೇರಿದಂತೆ ಕುಟುಂಬಸ್ಥರು, ಮೊಮ್ಮಕ್ಕಳು, ಬಂಧು ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಷ್ಪ ನಮನ ಸಲ್ಲಿಸಿದರು.