ಜೂ.30 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಆಗಮನ

0

1000 ಜನರ ಆಶ್ಲೇಷ ಪೂಜಾ ಮಂದಿರದ ಕಟ್ಟಡಕ್ಕೆ ಶಿಲಾನ್ಯಾಸ

ಮಾಸ್ಟರ್ ಪ್ಲಾನ್ ಸಭೆ, ಮಹತ್ವದ ಕಾಮಗಾರಿಗಳಿಗೆ ಪ್ಲಾನ್ ಸಿದ್ದ

ವ್ಯವಸ್ಥಾಪನಾ ಸಮಿತಿಯಿಂದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ
ವ್ಯವಸ್ಥಾಪನಾ ಸಮಿತಿ ವತಿಯಿಂದ ಇಂದು ದೇವಸ್ಥಾನದ ಆಡಳಿತ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ ಮಾಹಿತಿ ನೀಡುತ್ತಾ ಜೂ.30ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮುಜರಾಯಿ, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಆಗಮಿಸಲಿದ್ದು ಅಂದು 1000 ಜನರ ಆಶ್ಲೇಷ ಪೂಜಾ ಮಂದಿರದ ಕಟ್ಟಡಕ್ಕೆ ಶಿಲನ್ಯಾಸ ಕಾರ್ಯಕ್ರಮ ಹಾಗೂ
ಮಹತ್ವದ 30ನೇ ಮಾಸ್ಟರ್ ಪ್ಲಾನ್ ಸಮಿತಿ ಸಭೆ ನಡೆಯಲಿದ್ದು ಮಹತ್ವದ ಕಾಮಗಾರಿಗಳ ಪ್ಲಾನ್ ಗಳು ಸಿದ್ದಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಅಂದು ಬೆಳಗ್ಗೆ 11.30 ಕ್ಕೆ ಆಗಮಿಸಲಿರುವ ಸಚಿವರು ಆರಂಭದಲ್ಲಿ ಆಶ್ಲೇಷ ಪೂಜಾ ಮಂದಿರದ ಶಿಲನ್ಯಾಸ ನೆರವೇರಿಸಲಿದ್ದಾರೆ.
ಮಾಸ್ಟರ್ ಪ್ಲಾನ್ ಸಭೆಯು ನಡೆಯಲಿದ್ದು ಇದರಲ್ಲಿ 26 ಕೋಟಿ ವೆಚ್ಚದ ಸುತ್ತು ಪೌಳಿ ನಿರ್ಮಾಣ ಕೆಲಸ, ಬಗ್ಗೆ, ರಥ ಬೀದಿಯ ಬಲಭಾಗದಲ್ಲಿ ಸುಮಾರು 5000 ಜನ ಏಕಕಾಲದಲ್ಲಿ ಕುಳಿತುಕೊಳ್ಳುವ ಭೋಜನ ಶಾಲೆ ಅಂದಾಜು 80 – 100 ಕೋಟಿ ವೆಚ್ಚ, ಇಂಜಾಡಿ ಬಳಿ ಎಂಬಲ್ಲಿ ಯಾತ್ರಿಕರಿಗೆ 800ಕೊಠಡಿಗಳ ವಸತಿ ಯೋಜನೆ ಮತ್ತಿತರ ಕೆಲಸಗಳ ಪ್ಲಾನ್ ಗೆ ಅನುಮತಿ ಪಡೆಯುವ ಕೆಲಸ ನಡೆಯಲಿದೆ. ಇದಲ್ಲದೆ ಸುಬ್ರಹ್ಮಣ್ಯದಲ್ಲಿದ್ದ ಭೂ ಸ್ವಾಧೀನ ವಿವಾದಗಳ ಬಗ್ಗೆ ಸಚಿವರಲ್ಲಿ ಚರ್ಚೆ ನಡೆಯಲಿದೆ. ಕಾರ್ಯಕ್ರಮಕ್ಕೆ ಪ್ರೋಟೋಕಾಲ್‌ ನಂತೆ ಎಲ್ಲರನ್ನೂ ಅಹ್ವಾನಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಅಜಿತ್ ಕುಮಾರ್, ಶ್ರೀಮತಿ ಪ್ರವೀಣ ರೈ, ಶ್ರೀಮತಿ ಸೌಮ್ಯ ಭರತ್, ಮಾಸ್ಟರ್ ಪ್ಲಾನ್ ಸಮಿತಿಯ ಅಚ್ಚುತ ಆಲ್ಕಬೆ, ಲೋಲಾಕ್ಷ ಕೈಕಂಬ ಉಪಸ್ಥಿತರಿದ್ದರು.