ತೆಂಗಿನಕಾಯಿ ಒಡೆದು ಕಾಮಗಾರಿ ಕೆಲಸಕ್ಕೆ ಚಾಲನೆ
ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದಲ್ಲಿ ರುವ ಶ್ರೀ ಮಹಾವಿಷ್ಣು ಅಟೋ ಚಾಲಕ ಮಾಲಕ ಸಂಘದ ವತಿಯಿಂದ ನೀಡಲಾಗಿದ್ದ ಬೇಡಿಕೆಗೆ ಸ್ಪಂದಿಸಿರುವ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ರವರು ಮಲೆನಾಡು ಅಭಿವೃದ್ಧಿ ಪ್ರಾಧಿಕಾರದಯೋಜನೆಯವಿಶೇಷ ಅನುದಾನದಲ್ಲಿ ಸುಸಜ್ಜಿತ ಅಟೋ ನಿಲ್ದಾಣದ ನಿರ್ಮಾಣ ಕಾರ್ಯಕ್ಕೆ ಜೂ.28 ರಂದು ಚಾಲನೆ ನೀಡಿದರು.















ಕಳೆದಕೆಲಸಮಯಗಳಿಂದ ಅಟೋ ಚಾಲಕರು ಸಮರ್ಪಕವಾದ ನಿಲ್ದಾಣದ ವ್ಯವಸ್ಥೆ ಇಲ್ಲದಿರುವ ಬಗ್ಗೆ ಶಾಸಕರಲ್ಲಿ ಅಟೋ ಚಾಲಕ ಮಾಲಕ ಸಂಘದವರು ಮನವಿ ನೀಡಿದ ಮೇರೆಗೆ ಶಾಸಕರು ವಿಶೇಷ ಅನುದಾನ ರೂ.5 ಲಕ್ಷ ಬಿಡುಗಡೆಗೊಳಿಸಿದ್ದು ಅಟೋ ನಿಲ್ದಾಣದ ಕೆಲಸಕ್ಕೆ ತೆಂಗಿನಕಾಯಿ ಒಡೆದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಹಿರಿಯರಾದ
ವಿಷ್ಣುನಗರದ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಎಂ.ಜಿ.ಸತ್ಯನಾರಾಯಣ ಮಾಯ್ಪಡ್ಕ, ಹರ್ಷ ಕುಮಾರ್ ಮಾಯ್ಪಡ್ಕ,
ಪಂ.ಅಧ್ಯಕ್ಷೆ ಜಾನಕಿ ಕಂದಡ್ಕ,ಸ್ಥಳೀಯ ಮುಖಂಡರಾದ ಎಸ್.ಎನ್.ಮನ್ಮಥ, ಅರುಣ್ ಕುಮಾರ್ ನಾಯರ್ ಕಲ್ಲು, ತಿರುಮಲೇಶ್ವರ ಕುಡುಂಬಿಲ,
ಮಹೇಶ್ ಮೇರ್ಕಜೆ, ಕುಸುಮಾಧರ ಕಾನಡ್ಕ, ನಿರಂಜನ್, ಪಂ.ಸದಸ್ಯರಾದ ಕೃಷ್ಣ ಪ್ರಸಾದ್ ಮಾಡಬಾಕಿಲು, ದಿವ್ಯ ಮಡಪ್ಪಾಡಿ, ಜನಾರ್ದನಪಿ,ರಾಧಾಕೃಷ್ಣ. ಕೊರತ್ಯಡ್ಕ, ಪದ್ಮಪ್ರಿಯ ಮೇಲ್ತೋಟ, ಶಶಿಕಲಾ ಕೇನಡ್ಕ ಹಾಗೂ ಅಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸದಸ್ಯರು,ಗುತ್ತಿಗೆದಾರರು ,ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು, ವ್ಯಾಪಾರಸ್ಥರು ಉಪಸ್ಥಿತರಿದ್ದರು. ಗಣೇಶ್ ಪಿಲಿಕಜೆ ಸ್ವಾಗತಿಸಿ, ಪದ್ಮನಾಭ ಬೊಳ್ಳೂರು ವಂದಿಸಿದರು.










