ಆ.27: ಚೆಂಬು ಬಾಲಂಬಿಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ಚೆಂಬು ಬಾಲಂಬಿಯಲ್ಲಿ 4ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ.27 ರಂದು
ಪಯಸ್ವಿನಿ ಪ್ರಾ.ಕೃ.ಪ. ಸಹಕಾರ ಸಂಘ ಚೆಂಬು ಶಾಖೆಯ ಆವರಣದಲ್ಲಿ ನಡೆಯಲಿದೆ.
ಆ 27 ರಂದು ಬೆಳಿಗ್ಗೆ ಗಂಟೆ 6-00ಕ್ಕೆ: ಗಣಪತಿ ಹೋಮ, ವಿಗ್ರಹ ಪ್ರತಿಷ್ಠೆ, ಬೆಳಿಗ್ಗೆ ಗಂಟೆ 9-00ರಿಂದ ಭಜನಾ ಕಾರ್ಯಕ್ರಮ, ಬೆಳಿಗ್ಗೆ ಗಂಟೆ 10-30ರಿಂದ ಯಕ್ಷಗಾನ ತಾಳಮದ್ದಳೆ ‘ಶರಸೇತು ಬಂಧನ’, ಮಧ್ಯಾಹ್ನ ಗಂಟೆ 12-30ಕ್ಕೆ ಮಹಾಪೂಜೆ ಮಧ್ಯಾಹ್ನ ಗಂಟೆ 1-00ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.ಮಧ್ಯಾಹ್ನ ಗಂಟೆ 2-00ಕ್ಕೆ ಸಭಾ ಕಾರ್ಯಕ್ರಮ ಬಹುಮಾನ ವಿತರಣೆ, ಸಂಜೆ ಗಂಟೆ 3-00ಕ್ಕೆ ಶ್ರೀ ದೇವರ ಮೂರ್ತಿಯ ವೈಭವದ ಶೋಭಾಯಾತ್ರೆ ನಡೆದು ಕೂಡಡ್ಕ ಪಯಸ್ವಿನಿ ನದಿಯಲ್ಲಿ ಜಲಸ್ಥಂಭನಗೊಳ್ಳಲಿದೆ.