Home Uncategorized ಉಬರಡ್ಕ: ಸಾರ್ವಜನಿಕ ಶ್ರೀ ಗಣೇಶೋತ್ಸವ, ವೈಭವದ ಶೋಭಾಯಾತ್ರೆ

ಉಬರಡ್ಕ: ಸಾರ್ವಜನಿಕ ಶ್ರೀ ಗಣೇಶೋತ್ಸವ, ವೈಭವದ ಶೋಭಾಯಾತ್ರೆ

0

ಉಬರಡ್ಕ ಮಿತ್ತೂರಿನ ಶ್ರೀ ನರಸಿಂಹ ಶಾಸ್ತಾವು ದೇವಾಲಯ, ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಬರಡ್ಕ ಮಿತ್ತೂರು ಇದರ ವತಿಯಿಂದ 2 ದಿನಗಳ ಕಾಲ ನಡೆದ ಗಣೇಶೋತ್ಸವದ ಕೊನೆಯ ದಿನವಾಗಿ ಗಣೇಶನ ವೈಭವದ ಶೋಭಾಯಾತ್ರೆಯು ಕುಣಿತಭಜನೆ, ಬ್ಯಾಂಡ್, ವಾಲಗ, ಸಿಡಿಮದ್ದುಗಳೊಂದಿಗೆ ದೇವಾಲಯದಿಂದ ಹೊರಟು, ಕಕ್ಕೆಬೆಟ್ಟುವರೆಗೆ ಸಾಗಿ, ನಂತರ ಅದೇ ದಾರಿಯಲ್ಲಿ ಬಂದು ಶ್ರೀ ಮಿತ್ತೂರು ಉಳ್ಳಾಕುಲು ಜಾತ್ರೆ ನಡೆಯುವ ಸ್ಥಳದವರೆಗೆ ಸಾಗಿ ನಂತರ ಪುನ: ಅದೇ ದಾರಿಯಾಗಿ ಬಂದು ಉಬರಡ್ಕ ಮಿತ್ತೂರು ಕೃಷಿ ಪತ್ತಿನ ಸಹಕಾರಿ ಸಂಘದ ಹಿಂಬದಿಯ ಹೊಳೆಯಲ್ಲಿ ಜಲಸ್ಥಂಭನಗೊಳ್ಳುವುದರೊಂದಿಗೆ ಗಣೇಶೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು.

NO COMMENTS

error: Content is protected !!
Breaking