














ಕಳಂಜ ಗ್ರಾಮದ ಪಾಂಡಿಪಾಲು ನಿವಾಸಿ ದುಗ್ಗಪ್ಪ ಗೌಡ ಪಾಂಡಿಪಾಲು ಬೈನ್ ಹೆಮರೇಜ್ ಆಗಿ ಆ.30 ರ ರಾತ್ರಿ ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು.
ಆ.26 ರ ಸಂಜೆ ಬೈನ್ ಹೆಮರೇಜ್ ಆಗಿ ಮನೆಯೊಳಗೆ ಬಿದ್ದ ಅವರನ್ನು ಚಿಕಿತ್ಸೆಗಾಗಿ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ ಆಸ್ಪತ್ರೆ ಹಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಅವರನ್ನು ಆ.30 ರಂದು ಆಸ್ಪತ್ರೆಯಿಂದ ಅವರ ಮನೆಗೆ ಕರೆದೊಯ್ಯಲು ಶಿಪಾರಸ್ಸು ಮಾಡಿದ್ದು ಮನೆಗೆ ತರಲಾಗಿತ್ತು. ಅಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಮೀನಾಕ್ಷಿ , ಪುತ್ರ ದಿನೇಶ್ ಪಿ.ಡಿ, ಪುತ್ರಿಯರಾದ ಶ್ರೀಮತಿ ಜಯಶ್ರೀ, ಶ್ರೀಮತಿ ಮಮತಾ, ಸಹೋದರಿಯರು, ಅಳಿಯಂದಿರು, ಮೊಮ್ಮಗಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.










