ಕರ್ನಾಟಕ ಸರ್ಕಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕ್ಷೇತ್ರ ಶಾಲಾ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ಹಾಗೂ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇವರ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ವಿಜ್ಞಾನ ವಿಚಾರಗೋಷ್ಠಿ ಸೆ.3 ರಂದು ನಡೆಯಿತು.

ಸ್ಪರ್ಧೆಯ ಉದ್ಘಾಟನೆಯನ್ನು , ಕುಕ್ಕೆ ಶ್ರೀ ದೇವಸ್ಥಾನ ಸುಬ್ರಹ್ಮಣ್ಯ . ವ್ಯವಸ್ಥಾಪನ ಸಮಿತಿ ಸದಸ್ಯೆ ಶ್ರೀಮತಿ ಸೌಮ್ಯ ಭರತ್ ಮಾಡಿದರು.
















ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಗಣೇಶ್ ಪ್ರಸಾದ್ ವಹಿಸಿದ್ದರು, ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ಶಿಕ್ಷಣ ಸಂಯೋಜಕಿ ಶ್ರೀಮತಿ ಸಂಧ್ಯಾ ಕುಮಾರಿ, ಶಾಲಾ ಸಂಚಾಲಕರಾದ ಚಂದ್ರಶೇಖರ್ ನಾಯರ್, ಸ್ಪರ್ಧೆಯ ನಿರ್ಣಾಯಕರಾದ ಲಕ್ಷ್ಮಣ ದೇವಸ್ಯ, ಶ್ರೀಮತಿ ದಿವ್ಯಶ್ರೀ ಲಕ್ಷ್ಮಣ ,ಮುಖ್ಯ ಶಿಕ್ಷಕಿ ಶ್ರೀಮತಿ ವಿದ್ಯರತ್ನ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಯೋಗನಾಥ ನಿರೂಪಿಸಿ ವಂದಿಸಿದರು.
ಸ್ಪರ್ಧೆಯ ವಿಜೇತರು
ಪ್ರಥಮ ಸ್ಥಾನಚನ್ನು ಕುಮಾರಸ್ವಾಮಿ ವಿದ್ಯಾಲಯ ಸುಶ್ಮಿತಾ,
ರೋಟರಿ ಪ್ರೌಢಶಾಲೆ, ಸುಳ್ಯ ಆಹನ್ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.










