ಮಲೆನಾಡು ಅಭಿವೃದ್ಧಿ ಕ್ರಿಯಾ ಸಮಿತಿಯ ವತಿಯಿಂದ ಸಮೀಕ್ಷೆ
ಪಾಣತ್ತೂರು- ಕಲ್ಲಪಳ್ಳಿ- ಬಡ್ಡಡ್ಕ-ಕೂರ್ನಡ್ಕ ಪೆರಾಜೆ ಅಂತಾರಾಜ್ಯ ಸಂಪರ್ಕ ರಸ್ತೆ ಕಾರಿಡಾರ್ ನಿರ್ಮಾಣದ ಬೇಡಿಕೆಯ ಹಿನ್ನಲೆಯಲ್ಲಿ ಸಾರ್ವಜನಿಕರ ಮಲೆನಾಡು ಅಭಿವೃದ್ಧಿ ಕ್ರಿಯಾ ಸಮಿತಿ ರಚಿಸಲಾಗಿದ್ದು ಕ್ರಿಯಾ ಸಮಿತಿಯ ಪದಾಧಿಕಾರಿಗಳು ಪ್ರಸ್ತಾವಿತ ಅಂತಾರಾಜ್ಯ ರಸ್ತೆ ಹಾದು ಹೋಗುವ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದರು. ಪಾಣತ್ತೂರು – ಪೆರಾಜೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವ ನೂತನ ರಸ್ತೆ ಕಾರಿಡಾರ್ ಯೋಜನೆಗೆ ಕಾಪುಮಲೆ, ಕುಂದಲ್ಪಾಡಿ, ದೊಡ್ಡಡ್ಕ ಕೆಂಗಮೊಟ್ಟೆ ಪ್ರದೇಶದಲ್ಲಿ ಸಮೀಕ್ಷೆ ನಡೆಸಲಾಯಿತು.















ಸಮಿತಿಯ ಅಧ್ಯಕ್ಷ ಸೂರ್ಯನಾರಾಯಣ ಭಟ್, ಕಲ್ಲಪಳ್ಳಿ ಪನತ್ತಡಿ ಪಂಚಾಯತ್ ಸದಸ್ಯ ರಾಧಾಕೃಷ್ಣ ಕಲ್ಲಪಳ್ಳಿ, ಪಿ.ವಿ.ಜಾರ್ಜ್ ಕಲ್ಲಪಳ್ಳಿ, ಜಯಪ್ರಕಾಶ್ ಪೆರುಮುಂಡ, ಪೆರಾಜೆ ಗ್ರಾಮದ ಕೊಳಂಗಾಯ ಹರೀಶ್, ಡಿ. ಬಿ ಬಾಲಕೃಷ್ಣ, ಆರ್. ಡಿ. ಆನಂದ, ಜಯಕಿರಣ ಭಟ್, ಡಿ. ಸಿ. ದಿನರಾಜ್, ಕೋಡಿ ಸೀತಾರಾಮ ಮೊದಲಾದವರು ಉದ್ದೇಶಿತ ಹೆದ್ದಾರಿ ಹಾದು ಹೋಗಬಹುದಾದ ಸ್ಥಳ ಪರಿಶೀಲನೆ ಮಾಡಿದರು. ಅಂತಾರಾಜ್ಯ ಹೆದ್ದಾರಿ ನಿರ್ಮಾಣದ ಹಿನ್ನಲೆಯಲ್ಲಿ ಇತ್ತೀಚೆಗೆ ಬಡ್ಡಡ್ಕದಲ್ಲಿ ಎರಡೂ ರಾಜ್ಯಗಳ ಪ್ರಮುಖರ ನೇತೃತ್ವದಲ್ಲಿ ಸಭೆ ನಡೆಸಿ ಕ್ರಿಯಾ ಸಮಿತಿ ರಚಿಸಲಾಗಿತ್ತು.










